April 13, 2026
Monday, April 13, 2026
spot_img

ಅಮೆರಿಕದ ಟೆಕ್ಸಸ್​​ನಿಂದ ಬಂತು ‘ಪೈಕ್ಸಿಸ್ ಪಯನಿಯರ್’: ಸಂಘರ್ಷದ ಮಧ್ಯೆಯೂ ಕರ್ನಾಟಕ ತಲುಪಿದ LPG ಹಡಗು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜಾಗತಿಕ ಇಂಧನ ಪೂರೈಕೆ ಮೇಲೆ ಯುದ್ಧದ ಪರಿಣಾಮ ಮುಂದುವರಿದಿರುವ ನಡುವೆಯೇ, ಭಾರತಕ್ಕೆ ಅಮೆರಿಕಾದಿಂದ ಮತ್ತೊಂದು ಮಹತ್ವದ LPG ಸಾಗಣೆ ತಲುಪಿದೆ. ಸಿಂಗಾಪುರ್ ಧ್ವಜದಡಿಯಲ್ಲಿ ಸಂಚರಿಸುವ ‘ಪೈಕ್ಸಿಸ್ ಪಯನಿಯರ್’ ಹಡಗು ಭಾನುವಾರ ಬೆಳಗ್ಗೆ ನವ ಮಂಗಳೂರು ಬಂದರಿಗೆ ಆಗಮಿಸಿದೆ.

ನವ ಮಂಗಳೂರು ಬಂದರು ಪ್ರಾಧಿಕಾರದ ಮಾಹಿತಿ ಪ್ರಕಾರ, ಸುಮಾರು 47 ಸಾವಿರ ಟನ್ ಸಾಮರ್ಥ್ಯದ ಈ ಹಡಗು ಬೆಳಗ್ಗೆ 6 ಗಂಟೆ ಸುಮಾರಿಗೆ ಬರ್ತ್ ಸಂಖ್ಯೆ 13ಕ್ಕೆ ತಲುಪಿದೆ. ಟೆಕ್ಸಾಸ್‌ನ ನೆದರ್‌ಲ್ಯಾಂಡ್ ಬಂದರಿನಿಂದ ಫೆಬ್ರವರಿ 14ರಂದು ಹೊರಟಿದ್ದ ಈ ಹಡಗು, ಏಜಿಸ್ ಲಾಜಿಸ್ಟಿಕ್ಸ್ ಲಿಮಿಟೆಡ್ ಪರವಾಗಿ ಸುಮಾರು 16,700 ಟನ್ LPG ಇಳಿಸಲು ಸಿದ್ಧವಾಗಿದೆ. ಇಳಿಸುವ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಹಡಗು ಸೋಮವಾರ ಪ್ರಯಾಣ ಮುಂದುವರಿಸುವ ಸಾಧ್ಯತೆಯಿದೆ.

ಇದನ್ನೂ ಓದಿ:

ಪಶ್ಚಿಮ ಏಷ್ಯಾದಲ್ಲಿ ಕಳೆದ ಕೆಲವು ವಾರಗಳಿಂದ ಉದ್ವಿಗ್ನತೆ ಹೆಚ್ಚಿದ ಹಿನ್ನೆಲೆಯಲ್ಲಿ ಭಾರತದಲ್ಲಿ LPG ಪೂರೈಕೆ ಮೇಲೆ ಒತ್ತಡ ಕಂಡುಬಂದಿತ್ತು. ಈ ಹಿನ್ನೆಲೆಯಲ್ಲಿ ವಾಣಿಜ್ಯ ಬಳಕೆದಾರರಿಗೆ ತಾತ್ಕಾಲಿಕ ಮಿತಿಯನ್ನು ವಿಧಿಸಿ, ಗೃಹ ಬಳಕೆಗೆ ಆದ್ಯತೆ ನೀಡಲಾಗಿತ್ತು. ಇದೇ ನಡುವೆ, ‘ಜಾಗ್ ಲಾಡ್ಕಿ’ ಸೇರಿದಂತೆ ಇತರ ತೈಲ ಹಡಗುಗಳೂ ದೇಶದ ವಿವಿಧ ಬಂದರುಗಳಿಗೆ ತಲುಪಿರುವುದು ಸ್ವಲ್ಪ ನಿರಾಳತೆ ತಂದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !