ವಿಮಾನಗಳಿಗೆ ಹುಸಿ ಬಾಂಬ್​ ಬೆದರಿಕೆ ಮಾಡುವವರನ್ನು ‘ನೋ ಫ್ಲೈ ಲಿಸ್ಟ್​’ಗೆ ಸೇರಿಸಲು ಪ್ಲಾನ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಮಾನಗಳಿಗೆ ಹುಸಿ ಬಾಂಬ್​ ಬೆದರಿಕೆ ಕರೆಗಳು ಮಾಡುತ್ತಿರುವ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ನಾಗರಿಕ ವಿಮಾನಯಾನ ಸಚಿವಾಲಯ ಮುಂದಾಗಿದೆ. ಈ ರೀತಿ ಕರೆ ಮಾಡುವವರಿಗೆ ವಿಮಾನ ಪ್ರಯಾಣಕ್ಕೆ ಅನುಮತಿ ನೀಡದಂತೆ ಅವರನ್ನು ‘ನೋ ಫ್ಲೈ ಲಿಸ್ಟ್​​ ಪಟ್ಟಿ’ಗೆ ಸೇರಿಸುವ ಚಿಂತನೆ ಮಾಡುತ್ತಿದೆ.

ಹುಸಿ ಕರೆಗಳನ್ನು ತಡೆಗಟ್ಟುವ ಉದ್ದೇಶದಿಂದ ಸಚಿವಾಲಯವು ಬ್ಯೂರೋ ಆಫ್​ ಸಿವಿಲ್​​ ಏವಿಯೇಷನ್​ ಸೆಕ್ಯೂರಿಟಿ (ಬಿಸಿಎಎಸ್​) ಸೇರಿದಂತೆ ಅಸ್ತಿತ್ವದಲ್ಲಿರುವ ನಿಯಮಗಳಿಗೆ ತಿದ್ದುಪಡಿ ತರಲು ಚಿಂತಿಸುತ್ತಿದೆ. ಇದರಡಿ ಅಪರಾಧಿಗಳಿಗೆ ಕಠಿಣ ಶಿಕ್ಷೆ ಖಾತ್ರಿಗೊಳಿಸುವ ಆದೇಶ ಜಾರಿಗೂ ಸಿದ್ಧತೆ ನಡೆದಿದೆ ಎಂದು ತಿಳಿದು ಬಂದಿದೆ.

ವಿಮಾನಗಳಲ್ಲಿ ಬಾಂಬ್​​ ಇದೆ ಎಂದು ಸುಳ್ಳು ಕರೆ ಮಾಡುವವರನ್ನು ನೋ ಫ್ಲೈ ಲಿಸ್ಟ್​​ಗೆ ಸೇರಿಸುವ ಕುರಿತ ಪ್ರಸ್ತಾಪದ ಪರಿಶೀಲನೆ ನಡೆಯುತ್ತಿದೆ. ನಿಯಮಗಳ ಬದಲಾವಣೆಗೆ ಸಂಬಂಧಿಸಿದಂತೆ ಕಾನೂನು ತಜ್ಞರ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!