ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಾಂಟಾನಾ ವಿಮಾನ ನಿಲ್ದಾಣದಲ್ಲಿ ನಿಂತಿದ್ದ ವಿಮಾನಕ್ಕೆ ಮತ್ತೊಂದು ವಿಮಾನ ಡಿಕ್ಕಿ ಹೊಡೆದ ಪರಿಣಾಮ ಭಾರಿ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಈ ಘಟನೆಯಲ್ಲಿ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ. ನಾಲ್ಕು ಜನರನ್ನು ಹೊತ್ತೊಯ್ಯುತ್ತಿದ್ದ ಸಿಂಗಲ್ ಎಂಜಿನ್ ವಿಮಾನವು ಕಾಲಿಸ್ಪೆಲ್ ನಗರ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿತ್ತು. ಈ ವೇಳೆ ಸೊಕಾಟಾ ಟಿಬಿಎಂ 700 ಟರ್ಬೊಪ್ರೊಪ್ ವಿಮಾನವು, ನಿಲ್ದಾಣದಲ್ಲಿ ನಿಂತಿದ್ದ ಫ್ಲೈಟ್‌ಗೆ ಡಿಕ್ಕಿ ಹೊಡೆದಿದೆ.
ಅಪಘಾತದಿಂದ ಉಂಟಾದ ಬೆಂಕಿಯು ಹುಲ್ಲಿನ ಪ್ರದೇಶಕ್ಕೆ ಹರಡಿ ದೊಡ್ಡ ಪ್ರಮಾಣದ ಬೆಂಕಿ ಆವರಿಸಿದೆ. ನಗರದ ಒಡೆತನದ ಈ ಸಣ್ಣ ವಿಮಾನ ನಿಲ್ದಾಣವು ವಾಯುವ್ಯ ಮೊಂಟಾನಾದಲ್ಲಿರುವ ಸುಮಾರು 30,000 ಜನವಸತಿಯ ಕಾಲಿಸ್ಪೆಲ್‌ನ ದಕ್ಷಿಣದಲ್ಲಿದೆ.
ದಕ್ಷಿಣದಿಂದ ವಿಮಾನವೊಂದು ಬಂದು ರನ್‌ವೇಯ ಕೊನೆಯಲ್ಲಿ ಮತ್ತೊಂದು ವಿಮಾನಕ್ಕೆ ಡಿಕ್ಕಿ ಹೊಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಜನರು ವಿಮಾನದಿಂದ ಇಳಿಯಲು ಹೊರಟಿದ್ದ ವೇಳೆ ಡಿಕ್ಕಿಯಾಗಿತ್ತು. ಪೈಲಟ್ ಸಹಾಯದಿಂದ ವಿಮಾನದಿಂದ ಪ್ರಯಾಣಿಕರನ್ನು ಸುರಕ್ಷಿತವಾಗಿ ಇಳಿಸಲಾಗಿದೆ.