VIRAL | ಎಂಜಿನ್‌ ಸಮಸ್ಯೆಯಾಗಿ ಸೀದ ರಸ್ತೆ ಮೇಲೆ ಲ್ಯಾಂಡ್‌ ಆದ ವಿಮಾನ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ವಿಮಾನವೊಂದು ಎಂಜಿನ್ ವೈಫ್ಯಲ್ಯದಿಂದ ನೇರವಾಗಿ ರಸ್ತೆಗೆ ಲ್ಯಾಂಡ್ ಆಗಿರುವ ಘಟನೆ ಬ್ರೆಜಿಲ್‌ನ ಸಾಂತಾ ಕ್ಯಾಟರಿನಾದಲ್ಲಿ ನಡೆದಿದೆ.

ಗೌರಮಿರಿಮ್‌ನಲ್ಲಿರುವ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ವಿಮಾನವು ಸ್ಪಲ್ಪ ದೂರ ಹಾರುತ್ತಿದ್ದಂತೆ ಎಂಜಿನ್‌ನಲ್ಲಿ ತೊಂದರೆ ಕಾಣಿಸಿಕೊಂಡಿದೆ. ತುರ್ತು ಕ್ರಮವಾಗಿ ಪೈಲಟ್ ಗುರುವದ ಬಿಆರ್-1010 ಹೆದ್ದಾರಿ ಮೇಲೆ ಲ್ಯಾಂಡ್ ಮಾಡಿದ್ದಾರೆ.

ಸಿಂಗಲ್ ಎಂಜಿನ್ ಹೊಂದಿರುವ ಪೆಲಿಕನ್ 500ಬಿಆರ್ ವಿಮಾನದಲ್ಲಿ ಕಾಣಿಸಿಕೊಂಡ ಎಂಜಿನ್ ವೈಫಲ್ಯದಿಂದ ತುರ್ತು ಲ್ಯಾಂಡ್ ಮಾಡಲಾಯಿತು. ವಿಮಾನದಲ್ಲಿ ಇಬ್ಬರು ಪೈಲಟ್‌ಗಳಿದ್ದರು. ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!