ಹೊಸದಿಗಂತ ಡಿಜಿಟಲ್ ಡೆಸ್ಕ್:
ಲ್ಯಾಂಡ್ ಆಗಿ ರನ್ ವೇಯಲ್ಲಿ ಸಾಗುವಾಗ ವಿಮಾನ ಪಲ್ಟಿಯಾಗಿ ಹೊತ್ತಿ ಉರಿದ ಘಟನೆ ಕೆನಡಾದ ರಾಜಧಾನಿ ಟೊರೊಂಟೋದಲ್ಲಿ ನಡೆದಿದೆ.
80 ಜನರನ್ನು ಹೊತ್ತಿದ್ದ ಡೆಲ್ಟಾ ಏರ್ ಲೈನ್ಸ್ ವಿಮಾನ ಲ್ಯಾಂಡ್ ಆಗಿ ರನ್‌ವೇಯಲ್ಲಿ ಮುಂದಕ್ಕೆ ಬರುತ್ತಿತ್ತು. ಈ ವೇಳೆ ಅವಘಡ ಸಂಭವಿಸಿದೆ. ವಿಮಾನ ದುರಂತದಲ್ಲಿ ಕನಿಷ್ಠ 18 ಜನರಿಗೆ ಗಾಯಗಳಾಗಿವೆ. ಇದರಲ್ಲಿ ಒಂದು ಮಗು ಸೇರಿದಂತೆ, ಓರ್ವ ವ್ಯಕ್ತಿ ಹಾಗೂ ಮಹಿಳೆಯೊಬ್ಬರ ಸ್ಥಿತಿ ಗಂಭೀರವಾಗಿದೆ. ಘಟನೆಯಲ್ಲಿ ಯಾವುದೇ ಸಾವು ಸಂಭವಿಸಿಲ್ಲ. ವಿಮಾನ ಅಪಘಾತಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ.
76 ಪ್ರಯಾಣಿಕರು ಮತ್ತು ನಾಲ್ವರು ಸಿಬ್ಬಂದಿ ಇದ್ದ ವಿಮಾನ ಅಮೆರಿಕದ ಮಿನ್ನೇಸೋಟದ ಮಿನ್ನಿಯಾಪೋಲಿಸ್‌ನಿಂದ ಕೆನಡಾದ ಅತಿದೊಡ್ಡ ಮಹಾನಗರ ಟೊರೊಂಟೊಕ್ಕೆ ಬಂದಿತ್ತು ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.