ಹೊಸದಿಗಂತ ಡಿಜಿಟಲ್ ಡೆಸ್ಕ್:
‘ಆಟ ಬೇಡ… ಓದು ಮುಂದೆ ಹೋಗು’ ಎಂದು ಪಾಲಕರು ತಮ್ಮ ಮಕ್ಕಳನ್ನು ಬೈಯುವುದನ್ನು ನಾವು ಯಾವಾಗಲೂ ನೋಡುತ್ತೇವೆ. ಆದರೆ ಮಕ್ಕಳಿಗೆ ಅಧ್ಯಯನದಷ್ಟೇ ಆಟ ಆಡುವುದು ಮುಖ್ಯ ಎಂದು ಪೋಷಕರ ಗಮನದಲ್ಲಿಡಬೇಕಾದ ವಿಷಯ. ದಿನನಿತ್ಯ ಆಟವಾಡುವ ಮಕ್ಕಳು ಅಧ್ಯಯನದಲ್ಲಿಯೂ ಚುರುಕಾಗಿರುತ್ತಾರೆ.
ಮೂವತ್ತು ವರ್ಷಗಳ ಹಿಂದೆ, ಶಾಲೆಯಿಂದ ಮನೆಗೆ ಬಂದ ನಂತರ, ಮಕ್ಕಳು ತಮ್ಮ ಕಾಲುಗಳನ್ನು ತೊಳೆಯದೆ, ತಿಂಡಿ ತಿನ್ನದೆ ತಮ್ಮ ಬ್ಯಾಗ್ಗಳನ್ನು ನೆಲಕ್ಕೆ ಇಳಿಸಿ ಆಟವಾಡಲು ಓಡುತ್ತಿದ್ದರು. ಎಲ್ಲೆಂದರಲ್ಲಿ, ಯಾವುದೇ ಓಣಿಯಲ್ಲಿ ಕ್ರಿಕೆಟ್, ಚಿನ್ನಿದಾಂಡು, ಕುಂಟೆಬಿಲ್ಲೆ, ಬುಗರಿ, ಸ್ಕಿಪ್ಪಿಂಗ್ ಆಡುತ್ತಿದ್ದರು. ಈಗೆಲ್ಲಾ ಆನ್ಲೈನ್ ಗೇಮ್ ದಾಸರಾಗಿದ್ದಾರೆ.
ಈಗಿನ ಮಕ್ಕಳಿಗೆ ಓದು, ಪೋನು ಎರಡು ಬಿಟ್ಟರೆ ಬೇರೆ ಯಾವುದೂ ಬೇಕಿಲ್ಲ. ಶಾಲೆಯಿಂದ ಬಂದ ಬಳಿಕ ಲಘು ಉಪಹಾರ, ಟ್ಯೂಷನ್, ಟಿವಿ ಇಲ್ಲ, ಫೋನ್ ಹೀಗೆ ಅವರನ್ನು ಕಟ್ಟಿಹಾಕುತ್ತಾರೆ ಪೋಷಕರು. ಇದರಿಂದಾಗಿ ಮಕ್ಕಳ ಗ್ರಹಿಕೆ ಕಡಿಮೆಯಾಗುತ್ತದೆ ದೈಹಿಕ ಆರೋಗ್ಯಕ್ಕೆ ಮಾತ್ರವಲ್ಲದೇ ಕಲಿಕೆಗೂ ಆಟಗಳು ಉಪಯುಕ್ತ ಎನ್ನುತ್ತಾರೆ ನ್ಯಾಷನಲ್ ಅಕಾಡೆಮಿ ಆಫ್ ಹೆಲ್ತ್ ನ ಸಂಶೋಧಕರು.
ಮಕ್ಕಳಿಗೆ ಶಿಕ್ಷಣದಷ್ಟೇ ಆಟವೂ ಮುಖ್ಯ. ಆಟಗಳು ದೈಹಿಕ ಸಾಮರ್ಥ್ಯ, ಆರೋಗ್ಯ ಮತ್ತು ಬೆಳವಣಿಗೆಗೆ ದೈಹಿಕ ವ್ಯಾಯಾಮವಾಗಿ ಕಾರ್ಯನಿರ್ವಹಿಸುತ್ತವೆ. ಆಟವು ಏಕಾಗ್ರತೆ ಮತ್ತು ಸ್ಮರಣೆಯನ್ನು ಸುಧಾರಿಸುತ್ತದೆ. ಅದಕ್ಕಾಗಿಯೇ ಮಕ್ಕಳನ್ನು ದೈಹಿಕ ಚಟುವಟಿಕೆಗಳನ್ನು ಆಡಲು ಪ್ರೋತ್ಸಾಹಿಸಬೇಕು. ಪ್ರತಿ ಶಾಲೆಯು ಶಿಕ್ಷಣದಷ್ಟೇ ದೈಹಿಕ ವ್ಯಾಯಾಮಕ್ಕೆ ಉಪಯುಕ್ತವಾದ ಕ್ರೀಡೆಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಬೇಕಾಗಿದೆ.