ಹೊಸ ದಿಗಂತ ವರದಿ, ಮಂಗಳೂರು:
ಮರದಿಂದ ಬಿದ್ದು ಸೊಂಟದ ಕೆಳಗೆ ಸಂವೇದನೆ ಕಳೆದುಕೊಂಡು ಕಳೆದ ಆರು ವರ್ಷಗಳಿಂದ ಮಲಗಿದ ಸ್ಥಿತಿಯಲ್ಲಿರುವ ಬಂಟ್ವಾಳ ತಾಲೂಕು ಮಂಚಿ ಗ್ರಾಮದ ನಿವಾಸಿ ರಮೇಶ್ ಪ್ರಭು ಅವರು ಮುಂದಿನ ಚಿಕಿತ್ಸೆಗಾಗಿ ದಾನಿಗಳ ನೆರವು ಯಾಚಿಸಿದ್ದಾರೆ.
ರಮೇಶ್ ಪ್ರಭು ಅವರು 2009ರಲ್ಲಿ ಮರದ ಕೊಂಬೆಗಳನ್ನು ಕತ್ತರಿಸುವಾಗ ಬಿದ್ದು ಸೊಂಟದಿಂದ ಕೆಳಗಿನ ದೇಹದ ಕೆಳಭಾಗದಲ್ಲಿ ಸಂವೇದನೆಯನ್ನು ಕಳೆದುಕೊಂಡಿದ್ದರು. ಇದರಿಂದಾಗಿ ಅವರು ಕಳೆದ ಆರು ವರ್ಷಗಳಿಂದ ಮಲಗಿದ ಸ್ಥಿತಿಯಲ್ಲಿ ಜೀವನ ಕಳೆಯುತಿದ್ದಾರೆ. ಈಗಾಗಲೇ ಒಂದು ಶಸ್ತ್ರಚಿಕಿತ್ಸೆ ಮಾಡಲಾಗಿದೆ. ನೋವು ಹೆಚ್ಚಾದ ಕಾರಣ ಮತ್ತೊಂದು ಶಸ್ತ್ರಚಿಕಿತ್ಸೆ ಅಗತ್ಯವೆಂದು ವೈದ್ಯರು ಸೂಚಿಸಿದ್ದಾರೆ.
ಶಸ್ತ್ರಚಿಕಿತ್ಸೆಗೆ ಸುಮಾರು 6 ರಿಂದ 7 ಲಕ್ಷ ರೂ. ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ. ರಮೇಶ್ ಪ್ರಭು ಅವರದ್ದು ತುಂಬಾ ಬಡ ಕುಟುಂಬ. ಈಗಾಗಲೇ ಚಿಕಿತ್ಸೆಗೆ ಬಹಳಷ್ಟು ಹಣ ವ್ಯಯಿಸಲಾಗಿದೆ. ಈ ಹಿನ್ನೆಲೆಯಲ್ಲಿ ಶಸಚಿಕಿತ್ಸೆಗೆ ದಾನಿಗಳು ನೆರವಾಗುವಂತೆ ಅವರು ವಿನಂತಿಸಿದ್ದಾರೆ.
ರಮೇಶ್ ಪ್ರಭು ಅವರಹೆಸರಿ ನಲ್ಲಿರುವ ಎಸ್‌ಬಿಐ ಮೇಲ್ಕಾರ್ ಶಾಖೆಯ ಖಾತೆಗೆ ಹಣ ನೀಡಬಹುದು. ವಿವರ: ಅಕೌಂಟ್ ನಂಬರ್: 39942554846 Ifsc Code: SBIN0041021 ನೆರವು ನೀಡುವವರು ರಮೇಶ್ ಪ್ರಭು ಅವರ ಗೂಗಲ್ ಪೇ /-ನ್ ಪೇ ನಂಬರ್‌ಗೆ 9900400195 ನೆರವು ನೀಡಬಹುದು.