January20, 2026
Tuesday, January 20, 2026
spot_img

ದಯವಿಟ್ಟು ಮೇಡಂ, ನನ್ನ ಮಗಳಿಗೆ ಹೊಡೆಯಬೇಡಿ… ಟೀಚರ್ ಮುಂದೆ ಕಣ್ಣೀರಿಟ್ಟ ತಂದೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಯವಿಟ್ಟು ಮೇಡಂ, ನನ್ನ ಮಗಳಿಗೆ ಹೊಡೆಯಬೇಡಿ…ಇದು ಪುಟ್ಟ ಬಾಲಕಿಯ ತಂದೆಯ ಕಣ್ಣೀರ ನುಡಿ.

ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ಟೀಚರ್ ಹೊಡೆಯುತ್ತಾರೆ ನಾನು ಶಾಲೆಗೆ ಹೋಗಲ್ಲ ಎಂದು ಅಳುತ್ತಿದ್ದ ಮಗಳ ಕಣ್ಣೀರು ನೋಡಿ ತಂದೆ ಕಣ್ಣೀರಾಗಿದ್ದಾರೆ. ಮಗಳನ್ನು ಕರೆದುಕೊಂಡು ನೇರವಾಗಿ ಶಾಲೆ ಬಂದ ತಂದೆ, ಆಕೆಯ ತರಗತಿಗೆ ತೆರಳಿ ಆಕೆಯ ಜೊತೆಗೆ ಬೆಂಚ್‌ನಲ್ಲಿ ಕುಳಿತುಕೊಂಡು ತರಗತಿ ಟೀಚರ್‌ಗೆ ಕಣ್ಣೀರಿನ ಮನವಿ ಮಾಡಿದ್ದಾರೆ.

ದಯವಿಟ್ಟು ಮೇಡಂ, ನನ್ನ ಮಗಳಿಗೆ ಹೊಡೆಯಬೇಡಿ, ಆಕೆಗೆ ತಾಯಿ ಇಲ್ಲ. ನಾನು ಏಕಾಂಗಿಯಾಗಿ ಮಗಳನ್ನು ಬೆಳೆಸಿದ್ದೇನೆ, ಆಕೆಯೆ ಹೊಡೆಯಬೇಡಿ ಎಂದು ಮಗಳನ್ನು ಅಪ್ಪಿಕೊಂಡು ತಂದೆ ಕಣ್ಣೀರಿಟ್ಟಿದ್ದಾರೆ .

ಮಗಳು ಕಣ್ಣಿನಿಂದ ಒಂದು ಹನಿ ಕಣ್ಣೀರು ಬಿದ್ದರೂ ತಂದೆಗೆ ಸಹಿಸಿಕೊಲ್ಲಾಗದ ನೋವು. ತನ್ನ ಮಗಳಿಗೆ ತಾಯಿ ಪ್ರೀತಿ ಆರೆಕೆ ಸಿಗಲಿಲ್ಲ ಅನ್ನೋ ಕೊರಗು. ಹೀಗಾಗಿ ಮಗಳ ನಗುವಿಗಾಗಿ ಆತ ಸರ್ವಸ್ವವನ್ನೇ ಮುಡಿಪಾಗಿಟ್ಟಿದ್ದ. ಬಡ ಮಧ್ಯಮ ಕುಟುಂಬದ ಈತ ಮಗಳನ್ನು ಶಾಲೆಗೆ ಸೇರಿಸಿದ್ದ. ಆದರೆ ಕೆಲ ವಾರಗಳಿಂದ ಮಗಳು ಮನೆಗೆ ಬಂದು ಶಾಲೆಗೆ ಹೋಗಲು ನಿರಾಕರಿಸುತ್ತಿದ್ದಳು. ಆದರೆ ಮಗಳ ಮನ ಒಲಿಸಿ ಪ್ರತಿ ದಿನ ಮಗಳನ್ನು ಶಾಲೆಗೆ ಕಳುಹಿಸಿದ್ದ ತಂದೆಗೆ ಪ್ರತಿ ದಿನ ಸವಾಲಾಗಿತ್ತು.ಆದರೆ ಇತ್ತೀಚೆಗೆ ಮಗಳು ತಾನು ಶಾಲೆಗೆ ಹೋಗಲ್ಲ, ಟೀಟರ್ ಹೊಡೆಯುತ್ತಾರೆ ಎಂದಿದ್ದಾಳೆ.

ಈ ಮಾತು ಕೇಳಿ ತಂದೆಗೆ ಆಘಾತವಾಗಿದೆ. ಮಗಳಿಗೆ ಸಮಾಧಾನ ಮಾಡಿದ ತಂದೆ, ತಾನು ಟೀಚರ್ ಬಳಿ ಮಾತನಾಡುತ್ತೇನೆ. ಯಾವತ್ತೂ ಹೊಡೆಯಲ್ಲ ಎಂದು ಸಮಾಧಾನ ಪಡಿಸಿದ್ದಾರೆ. ಬಳಿಕ ಮಗಳನ್ನು ಕರೆದುಕೊಂಡು ಶಾಲೆಗೆ ಆಗಮಿಸಿದ ತಂದೆ ತರಗತಿಗೆ ತೆರಳಿದ್ದಾರೆ. ಅಸಹಾಯಕರಾಗಿ ಕುಳಿತ ತಂದೆ ಟೀಚರ್ ಬಳಿ ಕಣ್ಣೀರಿಟ್ಟು ಮನವಿ ಮಾಡಿದ್ದಾರೆ.

ದಯವಿಟ್ಟು ಮೇಡಂ, ನನ್ನ ಮಗಳಿಗೆ ಹೊಡೆಯಬೇಡಿ, ಆಕೆ ಶಾಲೆಗೆ ಬರಲು ಅಳುತ್ತಿದ್ದಾಳೆ. ಆಕೆಯ ಕಣ್ಣೀರು ನನಗೆ ನೋಡಲು ಸಾಧ್ಯವಿಲ್ಲ. ಆಕೆ ತಾಯಿ ಇಲ್ಲದೆ ಬೆಳೆದಿದ್ದಾಳೆ. ತಾಯಿ ಅಗಲಿಕೆ ನೋವು ಆಕೆಗೆ ಬರಬಾರದು ನಾನು ಪ್ರಯತ್ನಿಸುತ್ತಿದ್ದೇನೆ. ಕೈಮುಗಿದು ಬೇಡಿಕೊಳ್ಳುತ್ತೇನೆ, ಆಕೆಯ ಹೊಡೆಯಬೇಡಿ ಎಂದು ತಂದೆ ಟೀಚರ್ ಮುಂದೆ ಕಣ್ಣೀರಿಟ್ಟಿದ್ದಾರೆ.

ಮಗಳನ್ನು ಅಪ್ಪಿಕೊಂಡು ತಂದೆ ಟೀಚರ್ ಮುಂದೆ ತಂದೆ ಕಣ್ಣೀರಿಟ್ಟಿದ್ದಾರೆ. ತಂದೆ ಕಣ್ಮೀರಿಡುತ್ತಿರುವುದನ್ನು ನೋಡಿ ಮಗಳು ಕೂಡ ಕಣ್ಣೀರಿಟ್ಟಿದ್ದಾರೆ. ಇತರ ಶಾಲಾ ಮಕ್ಕಳು ಕೂಡ ಭಾವುಕರಾಗಿದ್ದಾರೆ.

Must Read