PM @ 8 pm | ಭಾರತ ಪಾಕಿಸ್ತಾನದ ಹೃದಯಕ್ಕೇ ದಾಳಿ ಮಾಡಿದೆ

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಆಪರೇಷನ್ ಸಿಂದೂರ್ ಯಶಸ್ವಿ ಕಾರ್ಯಾಚರಣೆ ಮತ್ತು ಪಾಕಿಸ್ತಾನದ ವಾಯುನೆಲೆಗಳ ಮೇಲೆ ಭಾರತದ ದಾಳಿ ಸೇರಿದಂತೆ ಹಲವು ವಿಷಯಗಳು ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು ಉದ್ದೇಶಿಸಿ ಮಾತಾಡಿದರು.

ಮೊದಲಿಗೆ ಕಳೆದ ಕೆಲವು ದಿನಗಳಲ್ಲಿ ನಾವೆಲ್ಲರೂ ದೇಶದ ಸಾಮರ್ಥ್ಯ ಮತ್ತು ತಾಳ್ಮೆಯನ್ನು ನೋಡಿದ್ದೇವೆ. ನಾನು ಸಶಸ್ತ್ರ ಪಡೆಗಳು, ಸೇನೆ, ಗುಪ್ತಚರ ಸಂಸ್ಥೆ ಮತ್ತು ವಿಜ್ಞಾನಿಗಳಿಗೆ ಭಾರತೀಯರ ಪರವಾಗಿ ಧನ್ಯವಾದಗಳನ್ನು ಸಲ್ಲಿಸಿದರು.

ಪಹಲ್ಗಾಮ್ ನಲ್ಲಿ ಕುಟುಂಬದೊಂದಿಗೆ ಜನರು ಸಮಯ ಕಳೆಯುತ್ತಿದ್ದರು. ಉಗ್ರರು, ಧರ್ಮ ಕೇಳಿ ಕುಟುಂಬಸ್ಥರ ಮುಂದೆಯೇ ಕೊಂದರು. ಈ ಮೂಲಕ ದೇಶದ ಐಕ್ಯತೆಯನ್ನು ಕದಡುವ ಪ್ರಯತ್ನ ಮಾಡಲಾಯ್ತು. ಈ ಉಗ್ರ ದಾಳಿಗೆ ಪ್ರತೀಕಾರ ಬೇಕೆಂದು ಇಡೀ ದೇಶದ ಜನರು ಒಗ್ಗಟ್ಟಿನಿಂದ ಆಗ್ರಹಿಸಿದ್ದರು. ಭಯೋತ್ಪಾದನೆಯನ್ನು ಮಣ್ಣಿನಲ್ಲಿ ಸೇರಿಸಲಾಗುವುದು ಎಂದು ನಾವು ದೇಶದ ಜನತೆಗೆ ಮಾತು ನೀಡಿದ್ದೇವೆ. ನಮ್ಮ ದೇಶದ ಮಹಿಳೆಯರ ಸಿಂದೂರವನ್ನು ಅಳಿಸಿದ್ರೆ ಏನಾಗುತ್ತೆ ಎಂದು ಆಪರೇಷನ್ ಸಿಂದೂರ ಮೂಲಕ ಉತ್ತರ ನೀಡಲಾಗಿದೆ. ಮೇ 6ರ ರಾತ್ರಿ, ಮೇ 7ರ ಬೆಳಗಿನ ಜಾವ ಆಪರೇಷನ್ ಸಿಂದೂರ ಕಾರ್ಯಚರಣೆ ನಡೆಸಲಾಯಿತು. ಭಾರತ ಇಂತಹ ಮಹತ್ವದ ನಿರ್ಧಾರ ತೆಗೆದುಕೊಳ್ಳುವಂತೆ ಪಾಕಿಸ್ತಾನ ಕಲ್ಪನೆಯೂ ಮಾಡಿಕೊಂಡಿರಲಿಲ್ಲ ಎಂದು ಹೇಳಿದರು.

ಆದ್ರೆ ಪಾಕ್ ಇತನ್ನ ಕ್ಷಿಪಣಿ ಮತ್ತು ಡ್ರೋನ್‌ಗಳ ಮೂಲಕ ದಾಳಿ ನಡೆಸಿತು. ಇವುಗಳನ್ನು ನಾಶಪಡಿಸುವ ಮೂಲಕ ಪಾಕಿಸ್ತಾನಕ್ಕೆ ಭಾರತ ತಿರುಗೇಟು ನೀಡಿದೆ. ಭಯೋತ್ಪಾದಕ ಪ್ರಧಾನ ಕಚೇರಿಯನ್ನೇ ಭಾರತ ನೆಲಸಮಗೊಳಿಸಿದೆ. ಉಗ್ರರ ವಿದ್ಯಾಲಯಗಳಾಗಿದ್ದ ತಾಣಗಳನ್ನು ಭಾರತ ಉಡೀಸ್ ಮಾಡಿದೆ ಎಂದರು.

ಇಷ್ಟಾದರೂ ಪಾಕಿಸ್ತಾನ ಭಯೋತ್ಪಾದನೆ ವಿರುದ್ಧ ಕ್ರಮ ತೆಗೆದುಕೊಳ್ಳುವ ಬದಲು, ಭಾರತದ ಶಾಲಾ ಕಾಲೇಜು, ಮಸೀದಿ, ಗುರುದ್ವಾರ, ಚರ್ಚ್, ನಾಗರೀಕರ ನಿವಾಸಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿತು. ಆದ್ರೆ ಪಾಕ್‌ನಿಂದ ಹಾರಿ ಬಂದ ಡ್ರೋನ್‌ಗಳನ್ನು ಆಕಾಶದಲ್ಲಿಯೇ ಭಾರತ ನಾಶ ಮಾಡಿದೆ. ಪಾಕಿಸ್ತಾನದ ವಾಯುನೆಲೆಗಳ ಮೇಲೆ ದಾಳಿ ನಡೆಸುವ ಮೂಲಕ ಪಾಕ್ ಸೊಕ್ಕನ್ನು ಅಡಗಿಸಲಾಗಿದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!