July 28, 2026
Tuesday, July 28, 2026
spot_img

ಪಶ್ಚಿಮ ಬಂಗಾಳದಲ್ಲಿ ದೋಣಿ ವಿಹಾರ ನಡೆಸಿ ಸುಂದರ ಫೋಟೊಗಳನ್ನು ಕ್ಲಿಕ್ಕಿಸಿದ ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಪ್ರಧಾನಿ ನರೇಂದ್ರ ಮೋದಿ ನೆಮ್ಮದಿಯ ಮುಂಜಾನೆಯನ್ನು ನದಿಯ ತೀರದಲ್ಲಿ ಕಳೆದಿದ್ದಾರೆ. ದೋಣಿಯ ಮೇಲೆ ಚಕ್ಕಲು ಬಕ್ಕಲು ಹಾಕಿಕೊಂಡು ಕುಳಿತು ಫೋಟೊಗಳನ್ನು ತೆಗೆದಿದ್ದಾರೆ.

ಇಂದು ಕೊಲ್ಕತ್ತಾದ ಹೂಗ್ಲಿ ನದಿಯ ತೀರದಲ್ಲಿ ಪ್ರಧಾನಿ ಪ್ರಶಾಂತತೆಯನ್ನು ಎಂಜಾಯ್‌ ಮಾಡಿದ್ದಾರೆ. ತಾವು ಕ್ಲಿಕ್ಕಿಸಿದ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್‌ ಮಾಡಿದ್ದಾರೆ.

ಅಂದದ ವಿದ್ಯಾಸಾಗರ ಸೇತುವೆ ಎಲ್ಲ ಫೋಟೊಗಳ ಬ್ಯಾಕ್‌ಗ್ರೌಂಡ್‌ನಲ್ಲಿದೆ. ಪ್ರತಿ ಬಂಗಾಳಿಗೂ ಗಂಗಾ ನದಿ ಆತ್ಮದಂತೆ. ಇದರಲ್ಲಿ ಶಕ್ತಿಯಿದೆ, ನೆಮ್ಮದಿಯಿದೆ, ದೈವಿಕತನವಿದೆ.

ಇಂದು ಬೆಳಗ್ಗೆ ನಾನು ಕೊಲ್ಕತ್ತಾದಲ್ಲಿನ ಹೂಗ್ಲಿ ನದಿ ತೀರದಲ್ಲಿ ಸಮಯ ಕಳೆದೆ. ಗಂಗಾಮಾತೆಗೆ ಕೃತಜ್ಞತೆ ಹೇಳಿದೆ ಎಂದು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. ದೋಣಿಗಾರರನ್ನು ಮತ್ತು ಬೆಳ್ಳಂಬೆಳಗ್ಗೆ ವಾಕಿಂಗ್‌ ಹೋಗುವ ಜನರನ್ನೂ ಮಾತನಾಡಿಸಿದೆ ಎಂದು ಹೇಳಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !