ಮನ್ ಕೀ ಬಾತ್ ​ನಲ್ಲಿ ‘ಏಕ್ ಪೇಡ್, ಮಾ ಕೆ ನಾಮ್’ ಅಭಿಯಾನಕ್ಕೆ ಪ್ರಧಾನಿ ಮೋದಿ ಕರೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರಧಾನಿ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾದ ನಂತರ ತಮ್ಮ ಮೊದಲ ‘ಮನ್ ಕಿ ಬಾತ್’ ರೇಡಿಯೋ ಕಾರ್ಯಕ್ರಮ ನೀಡಿದರು. ನಾಲ್ಕು ತಿಂಗಳ ನಂತರ, ಸಂಚಿಕೆ 111 ಇಂದು ಪ್ರಸಾರವಾಯಿತು. ಈ ಕಾರ್ಯಕ್ರಮದಲ್ಲಿ, ಕೆಲವು ವಿಶೇಷ ಕಾರ್ಯಕ್ರಮಗಳು ಮತ್ತು ದೇಶದ ವಿವಿಧ ಭಾಗಗಳ ಜನರನ್ನು ಗೌರವಿಸುವ ಪ್ರಯತ್ನವನ್ನು ಪ್ರಧಾನ ಮಂತ್ರಿಗಳು ಮುಂದುವರೆಸಿದರು. ಅಮ್ಮನ ಹೆಸರಿನಲ್ಲಿ ಗಿಡ ನೆಡುವ ಕಾರ್ಯಕ್ರಮಕ್ಕೆ ಕರೆ ನೀಡಿದರು.

ರೇಡಿಯೋ ಕಾರ್ಯಕ್ರಮ ‘ಮನ್ ಕಿ ಬಾತ್’ ನ 111ನೇ ಸಂಚಿಕೆಯಲ್ಲಿ ನರೇಂದ್ರ ಮೋದಿ ಅವರು ಕೇರಳದ ಬುಡಕಟ್ಟು ಸಮುದಾಯದವರು ತಯಾರಿಸಿದ ಚತ್ರಿ, ಆಂಧ್ರದಲ್ಲಿ ಬುಡಕಟ್ಟು ಸಮುದಾಯದವರು ಬೆಳೆದ ಅರಕು ಕಾಫಿ, ಮತ್ತು ವಾರಾಂತ್ಯದಲ್ಲಿ ಬೆಂಗಳೂರು ಕಬ್ಬನ್ ಪಾರ್ಕ್‌ನಲ್ಲಿ ನಡೆದ ಸಂಸ್ಕೃತ ಸಂವಾದ ಕಾರ್ಯಕ್ರಮವನ್ನು ಪ್ರಸ್ತಾಪಿಸಿದರು.

ಪ್ರತಿಯೊಬ್ಬರಿಗೂ ತಾಯಿಯ ಪ್ರೀತಿ ಬಹಳ ಮುಖ್ಯ. ಅಮ್ಮನ ಋಣ ಎಂದಿಗೂ ತೀರಿಸಲಾಗದು. ಈ ಹಿನ್ನೆಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಗೆ ಮೀಸಲಿಟ್ಟ ವಿಶೇಷ ಅಭಿಯಾನವನ್ನು ಆರಂಭಿಸಿದ್ದೇವೆ. “ಏಕ್ ಪೈಡ್, ಮಾ ಕೆ ನಾಮ್” ಅಭಿಯಾನವಾಗಿದೆ ಎಂದು ಮೋದಿ ಹೇಳಿದರು. #Plant4Mother ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲು ಅವರು ಕರೆ ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!