ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ನರೇಂದ್ರ ಮೋದಿ ಇಂದು ಕೇಂದ್ರ ಸಚಿವ ಎಲ್ ಮುರುಗನ್ ನಿವಾಸದಲ್ಲಿ ಪೊಂಗಲ್ ಹಬ್ಬವನ್ನು ಆಚರಿಸಿದ್ದಾರೆ. ಪ್ರಧಾನಿ ಸಾಂಪ್ರದಾಯಿಕ ಪೂಜೆ ಮತ್ತು ಆರತಿಯನ್ನು ನೆರವೇರಿಸಿದ್ದಾರೆ.
ಅಷ್ಟೇ ಅಲ್ಲದೆ ಗೋಸೇವೆ ಕೂಡ ಮಾಡಿದ್ದಾರೆ.ಪ್ರಕೃತಿಯ ಬಗ್ಗೆ ಕೃತಜ್ಞತೆಯನ್ನು ಪದಗಳಿಗೆ ಸೀಮಿತಗೊಳಿಸಬಾರದು, ಅದನ್ನು ನಮ್ಮ ದೈನಂದಿನ ಜೀವನದ ಭಾಗವನ್ನಾಗಿ ಮಾಡಿಕೊಳ್ಳಬೇಕು ಎಂದು ಪೊಂಗಲ್ ಜನರಿಗೆ ಕಲಿಸುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು.
ಭೂಮಿಯು ನಮಗೆ ಇಷ್ಟೊಂದು ನೀಡಿದಾಗ, ಅದನ್ನು ಪಾಲಿಸುವುದು ನಮ್ಮ ಜವಾಬ್ದಾರಿಯಾಗಿದೆ. ಮಣ್ಣನ್ನು ಆರೋಗ್ಯಕರವಾಗಿಡುವುದು, ನೀರನ್ನು ಸಂರಕ್ಷಿಸುವುದು ಮತ್ತು ಸಂಪನ್ಮೂಲಗಳನ್ನು ವಿವೇಚನೆಯಿಂದ ಬಳಸುವುದು ಮುಂದಿನ ಪೀಳಿಗೆಗೆ ಅತ್ಯಂತ ಮುಖ್ಯ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.


