Sunday, January 11, 2026

ಸೋಮನಾಥನ ಸನ್ನಿಧಿಯಲ್ಲಿ ಓಂಕಾರ ಪಠಿಸಿದ ಪ್ರಧಾನಿ ಮೋದಿ: ಡ್ರೋನ್ ಪ್ರದರ್ಶನ ಕಣ್ತುಂಬಿಕೊಂಡ ನಮೋ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸೋಮನಾಥ ಸ್ವಾಭಿಮಾನ ಪರ್ವದಲ್ಲಿ ಭಾಗವಹಿಸಲು ಗುಜರಾತಿನ ಸೋಮನಾಥಕ್ಕೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದ ದೇಗುಲ ತಲುಪಿದ್ದಾರೆ. ಇಲ್ಲಿ ನಡೆಯುತ್ತಿರುವ ಪ್ರಮುಖ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಕಾರ್ಯಕ್ರಮವಾದ ಸೋಮನಾಥ ಸ್ವಾಭಿಮಾನ್ ಪರ್ವ್‌ ಕಾರ್ಯಕ್ರಮಲ್ಲಿ ಭಾಗವಹಿಸಿದರು.

ಓಂ ಪಠಣದಲ್ಲಿ ತೊಡಗಿಸಿಕೊಂಡು ತಾವು ಕೂಡ ಧ್ಯಾನ ನಿರತರಾದರು. ಭಾರತದಾದ್ಯಂತದ ನೂರಾರು ಸಂತರು ಸೋಮನಾಥದಲ್ಲಿ 72 ಗಂಟೆಗಳ ನಿರಂತರ ‘ಓಂ’ ಪಠಣದಲ್ಲಿ ಭಾಗವಹಿಸಲು ಒಟ್ಟುಗೂಡಿದ್ದಾರೆ.

ಜನವರಿ 8 ರಿಂದ 11 ರವರೆಗೆ ಸೋಮನಾಥ ದೇವಾಲಯದಲ್ಲಿ ಸೋಮನಾಥ ಸ್ವಾಭಿಮಾನ್ ಪರ್ವ್‌ ನಡೆಯಲಿದೆ. ಇದರ ಭಾಗವಾಗಿ 72 ಗಂಟೆಗಳ ಕಾಲ ‘ಓಂ’ ಪಠಣ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಭಾಗಿಯಾದ ಪ್ರಧಾನಿ ನರೇಂದ್ರ ಮೋದಿ, ತಾವೂ ಓಂಕಾರ ಪಠಿಸಿದರು.

ಬಳಿಕ ಸೋಮನಾಥ ದೇವಾಲಯದಲ್ಲಿ ಆಯೋಜಿಸಲಾಗಿದ್ದ ಡ್ರೋನ್ ಪ್ರದರ್ಶನದಲ್ಲಿ ಭಾಗವಹಿಸಿ, ಅದ್ಭುತ ಕ್ಷಣವನ್ನು ಕಣ್ತುಂಬಿಕೊಂಡರು.

error: Content is protected !!