ಹೊಸದಿಗಂತ ಡಿಜಿಟಲ್ ಡೆಸ್ಕ್:
26/11ರ ಮುಂಬೈ ದಾಳಿಯಾಗಿ ಇಂದಿಗೆ 15 ವರ್ಷಗಳು ಕಳೆದಿವೆ. ಈ ಕರಾಳವನ್ನು ನೆನೆದು ಹುತಾತ್ಮರಿಗೆ ಪ್ರಧಾನಿ ನರೇಂದ್ರ ಮೋದಿ ಗೌರವ ನಮನ ಸಲ್ಲಿಸಿದರು.
107ನೇ ಸಂಚಿಕೆಯ ʼಮನ್ ಕಿ ಬಾತ್ʼ ರೇಡಿಯೋ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತವು ಅಂದು ಘೋರ ದಾಳಿಯನ್ನು ಎದುರಿಸಿತ್ತು. ಆದರೆ ಆ ದಾಳಿಯಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿದೆ ಮತ್ತು ಭಯೋತ್ಪಾದನೆಯನ್ನು ಹತ್ತಿಕ್ಕುವಲ್ಲಿ ಸಮರ್ಥವಾಗಿ ಮುನ್ನುಗುತ್ತಿದೆ ಎಂದರು. ಅಲ್ಲದೆ ಅಂದಿನ ದಾಳಿಯಲ್ಲಿ ಹುತಾತ್ಮರಾದವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
ಈ ವೇಳೆ ನಾನು ನನ್ನ ದೇಶವಾಸಿಗಳಿಗೆ ಸಂವಿಧಾನ ದಿನದ ಶುಭಾಶಯಗಳನ್ನು ತಿಳಿಸುತ್ತೇನೆ. ಈ ದಿನ ಭಾರತೀಯರಿಗೆ ಮಹತ್ವದ ದಿನವೆಂದರು.
ಇದೇ ವೇಳೆ ವಿದೇಶದಲ್ಲಿ ಮದುವೆಗಳನ್ನು ಆಯೋಜಿಸುವ ಕೆಲವು ಕುಟುಂಬಗಳ ಅಭ್ಯಾಸವನ್ನು ಪ್ರಧಾನಿ ಮೋದಿ ಪ್ರಶ್ನೆ ಮಾಡಿದ್ದಾರೆ. ಅಂತಹ ಆಚರಣೆಗಳನ್ನು ದೇಶದೊಳಗೆ ನಡೆಸಬೇಕೆಂದು ಅವರು ಒತ್ತಾಯಿಸಿದ್ದಾರೆ.
ದೀಪಾವಳಿ ಹಬ್ಬದ ವೇಳೆ ಡಿಜಿಟಲ್ ಪಾವತಿ ಹೆಚ್ಚಾಗಿ ಕಂಡುಬಂದಿದ್ದು, ಜನರು ನಗದು ಪಾವತಿಸಿ ಖರೀದಿಸುವ ಪ್ರವೃತ್ತಿ ಕಡಿಮೆಯಾಗುತ್ತಿದೆ. ಈ ಮೂಲಕ ಜನರು ಡಿಜಿಟಲ್ ಕ್ರಾಂತಿಯ ಯಶಸ್ಸಿಗೆ ಮುಂದಾಗಿದ್ದಾರೆ ಎಂದರು.
‘ಸ್ವಚ್ಛ ಭಾರತ ಅಭಿಯಾನ’ ಮತ್ತು ‘ವೋಕಲ್ ಫಾರ್ ಲೋಕಲ್’ ಅಭಿಯಾನಗಳನ್ನು ಅವರು ಶ್ಲಾಘಿಸಿದರು.
ಸ್ಥಳೀಯ ಉತ್ಪನ್ನಗಳನ್ನು ಬಳಸುವ ಬಯಕೆ ಹಬ್ಬಗಳಿಗೆ ಸೀಮಿತವಾಗದೆ, ಮದುವೆ ಸಮಾರಂಭಗಳಿಗೂ ಅನ್ವಯವಾಗಬೇಕು ಎಂದು ತಿಳಿಸಿದರು.