ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ಜಾಹೀರಾತು ಲೋಕದ ದಿಗ್ಗಜ ಹಾಗೂ ಸೃಜನಶೀಲತೆಯ ಪ್ರತಿರೂಪ ಪಿಯೂಷ್ ಪಾಂಡೆ ಅವರು 70ನೇ ವಯಸ್ಸಿನಲ್ಲಿ ಮುಂಬೈನಲ್ಲಿ ನಿಧನ ಹೊಂದಿದ್ದಾರೆ. ಅವರ ಅಗಲಿಕೆಯಿಂದ ಜಾಹೀರಾತು ಕ್ಷೇತ್ರದಷ್ಟೇ ಅಲ್ಲ, ದೇಶದ ಸೃಜನಾತ್ಮಕ ವಲಯದಲ್ಲೂ ದುಃಖದ ಅಲೆ ಹರಡಿದೆ. ಪಿಯೂಷ್ ಪಾಂಡೆ ಅವರು ಭಾರತದಲ್ಲಿ ಕ್ರಾಂತಿಕಾರಕ ಜಾಹೀರಾತು ಪರಿವರ್ತನೆಗೆ ಕಾರಣರಾಗಿದ್ದರು.
ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದು, ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿ “ಜಾಹೀರಾತು ದಂತಕಥೆ ಪಿಯೂಷ್ ಪಾಂಡೆ ಅವರೊಂದಿಗೆ ಕಳೆದ ಸಂವಹನದ ಕ್ಷಣಗಳನ್ನು ನಾನು ಪ್ರೀತಿಯಿಂದ ನೆನಪಿಸಿಕೊಳ್ಳುತ್ತೇನೆ. ಅವರು ಜಾಹೀರಾತು ಕ್ಷೇತ್ರಕ್ಕೆ ಸ್ಮಾರಕ ಕೊಡುಗೆ ನೀಡಿದ್ದಾರೆ. ಅವರ ಸೃಜನಶೀಲತೆ ಸದಾ ಮೆಚ್ಚುಗೆಗೆ ಪಾತ್ರವಾಗಿತ್ತು” ಎಂದು ಹೇಳಿದ್ದಾರೆ.
“ಶ್ರೀ ಪಿಯೂಷ್ ಪಾಂಡೆ ಅವರ ಪ್ರತಿಭೆ ಮತ್ತು ದೃಷ್ಟಿಕೋನ ಭಾರತದ ಸಂವಹನ ಕ್ಷೇತ್ರವನ್ನು ಹೊಸ ಎತ್ತರಕ್ಕೆ ಕೊಂಡೊಯ್ದಿದೆ. ಅವರ ಅಗಲಿಕೆ ದೇಶದ ಸೃಜನಾತ್ಮಕ ಲೋಕಕ್ಕೆ ದೊಡ್ಡ ನಷ್ಟ” ಎಂದು ಪೋಸ್ಟ್ ಮಾಡಿದ್ದಾರೆ.
ಪಿಯೂಷ್ ಪಾಂಡೆ ಅವರು ಅನೇಕ ಐಕಾನಿಕ್ ಜಾಹೀರಾತುಗಳ ಮೂಲಕ ಭಾರತೀಯ ಬ್ರಾಂಡ್‌ಗಳಿಗೆ ಅಂತಾರಾಷ್ಟ್ರೀಯ ಗುರುತನ್ನು ತಂದುಕೊಟ್ಟಿದ್ದರು. ಅವರ ಕಲೆ, ದೃಷ್ಟಿ ಮತ್ತು ನವೀನತೆ ಭಾರತೀಯ ಜಾಹೀರಾತು ಕ್ಷೇತ್ರದಲ್ಲಿ ಸದಾ ಅಮರವಾಗಿರುತ್ತದೆ.

