ಹೊಸದಿಗಂತ ಡಿಜಿಟಲ್ ಡೆಸ್ಕ್
ಪ್ಯಾರಾ ಶೂಟಿಂಗ್ ವಿಶ್ವಕಪ್‌ನಲ್ಲಿ ಭಾರತದ ಶೂಟರ್ ಗಳಾದ ಅವನಿ ಲೆಖರಾ ಹಾಗೂ ಶ್ರೀಹರ್ಷ ದೇವರಡ್ಡಿ ಚಿನ್ನ ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಪ್ರಧಾನಿ ಮೋದಿ, ಟ್ವಿಟ್ ಮೂಲಕ ಇಬ್ಬರು ಸಾಧಕರನ್ನು ಪ್ರಶಂಸಿಸಿದ್ದಾರೆ.
ಫ್ರಾನ್ಸ್‌ನ ಚಟೌರೊಕ್ಸ್‌ನಲ್ಲಿ ನಡೆದ ಪ್ಯಾರಾ ಶೂಟಿಂಗ್ ವಿಶ್ವಕಪ್‌ನ ಮಹಿಳೆಯರ ವಿಭಾಗದ 10 ಮೀಟರ್ ಏರ್ ರೈಫಲ್ ಸ್ಟ್ಯಾಂಡಿಂಗ್ ಸ್ಪರ್ಧೆಯಲ್ಲಿ ಲೆಖರಾ ವಿಶ್ವ ದಾಖಲೆಯೊಂದಿಗೆ ಚಿನ್ನ ಗೆದ್ದರು. 20 ವರ್ಷದ ಲೆಖರಾ 2024 ರ ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಸ್ಥಾನ ಸಂಪಾದಿಸುವ ಹಾದಿಯಲ್ಲಿ ತಮ್ಮದೇ ಹಿಂದಿನ ದಾಖಲೆಯಾದ 249.6 ಮೀ. ವಿಶ್ವ ದಾಖಲೆಯನ್ನು ಮುರಿದರು. ಭಾರತದ ಮತ್ತೊರ್ವ ಶೂಟರ್ ಶ್ರೀಹರ್ಷ ದೇವರಡ್ಡಿ ಪುರುಷರ ವಿಭಾಗದಲ್ಲಿ ಚಿನ್ನಕ್ಕೆ ಗುರಿಯಿಟ್ಟರು.
ಪ್ಯಾರಾ ಶೂಟಿಂಗ್ ವಿಶ್ವಕಪ್‌ನಲ್ಲಿ ಚಿನ್ನ ಗೆದ್ದ ಇಬ್ಬರು ಸಾಧಕರನ್ನು ಪ್ರಧಾನಿ ಮೋದಿ ಕೊಂಡಾಡಿದ್ದಾರೆ. ಇದೊಂದು ಐತಿಹಾಸಿಕ ಸಾಧನೆ ಎಂದು ಬಣ್ಣಿಸಿದ್ದಾರೆ.
Proud of Sriharsha Devaraddi for wining the Gold. His determination is truly motivating. Best wishes for his future endeavours. https://t.co/z9g42AHng3
— Narendra Modi (@narendramodi) June 8, 2022
“ಈ ಐತಿಹಾಸಿಕ ಸಾಧನೆಗಾಗಿ ಅವನಿ ಲೇಖರ ಅವರಿಗೆ ಅಭಿನಂದನೆಗಳು. ನೀವು ಯಶಸ್ಸಿನ ಹೊಸ ಎತ್ತರಕ್ಕೆ ಏರುತ್ತಿರಿ.. ಹೀಗೆ ನಿಮ್ಮ ಸಾಧನೆಗಳು ಇತರರಿಗೆ ಸ್ಫೂರ್ತಿ ನೀಡುತ್ತಿರಲಿ. ನಿಮಗೆ ಶುಭಾಶಯಗಳು ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ಮತ್ತೊಂದು ಟ್ವೀಟ್‌ನಲ್ಲಿ, “ಶ್ರೀಹರ್ಷ ದೇವರಡ್ಡಿ ಚಿನ್ನ ಗೆದ್ದಿದ್ದಕ್ಕಾಗಿ ಹೆಮ್ಮೆಪಡುತ್ತೇನೆ. ಅವರ ಸಂಕಲ್ಪ ನಿಜವಾಗಿಯೂ ಪ್ರೇರೇಪಿಸುವಂತಹದ್ದು. ಅವರ ಮುಂದಿನ ಎಲ್ಲಾ ಪ್ರಯತ್ನಗಳಿಗೆ ಶುಭಾಶಯಗಳು” ಎಂದು ಮೋದಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.