ಹೊಸದಿಗಂತ ಡಿಜಿಟಲ್ ಡೆಸ್ಕ್:
ಇನ್ನೇನು ಕೆಲವೇ ದಿನಗಳಲ್ಲಿ ಲೋಕಸಭಾ ಚುನಾವಣೆ ನಡೆಯಲಿದ್ದು, ಈಗಾಗಲೇ ರಾಜಕೀಯ ಬಿಸಿ ತಟ್ಟಿದೆ.
ಚುನಾವಣೆಗಾಗಿ ಹಲವು ರಾಜಕೀಯ ಪಕ್ಷಗಳು ತಮ್ಮ ಪ್ರಚಾರವನ್ನು ತೀವ್ರಗೊಳಿಸಿವೆ. ಬಂಗಾಳದ ಕೂಚ್ ಬಿಹಾರ್ ಲೋಕಸಭೆ ಚುನಾವಣೆಯ ಬಿರುಸಿನ ಪ್ರಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಗಮಿಸಲಿದ್ದಾರೆ.
ಪಿಎಂ ಮೋದಿ ಮತ್ತು ತೃಣಮೂಲ ಕಾಂಗ್ರೆಸ್ ಅಧ್ಯಕ್ಷರು ಒಂದೇ ದಿನ ಒಂದು ಕ್ಷೇತ್ರದ ಮತದಾರರನ್ನು ಉದ್ದೇಶಿಸಿ ಮಾತನಾಡುವುದು ಇದೇ ಮೊದಲು. ಟಿಎಂಸಿ ವರಿಷ್ಠೆ ಮಮತಾ ಅವರು ಮಧ್ಯಾಹ್ನದ ಸುಮಾರಿಗೆ ಕೂಚ್ ಬಿಹಾರ್‌ನಲ್ಲಿ ಪ್ರಚಾರ ನಡೆಸಲಿದ್ದಾರೆ.
ಪ್ರಧಾನಿ ಮೋದಿ ಅವರು 30 ಕಿಮೀ ದೂರದಲ್ಲಿರುವ ರಾಸ್ಲೀಲಾ ಮೈದಾನದಲ್ಲಿ ಮಧ್ಯಾಹ್ನ 3 ಗಂಟೆಗೆ ಭಾಷಣ ಮಾಡಲಿದ್ದಾರೆ.