ಹೊಸದಿಗಂತ ವರದಿ, ವಿಜಯಪುರ
ಪುಲ್ವಾಮಾದಲ್ಲಿ ಸೈನಿಕರು ಸಾಯಲು ಮೋದಿ ಯಾಕೆ ಕಾರಣರಾಗುತ್ತಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಸರ್ಜಿಕಲ್ ಸ್ಟ್ರೈಕ್ ಮಾಡಿ ನಮ್ಮನ್ನು ರಕ್ಷಣೆ ಮಾಡಿದ್ದಾರೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆದರೆ ನಮ್ಮ ಸೈನಿಕರಿಗೆ ಅವರು ತೊಂದರೆ ಮಾಡಿದ್ದಕ್ಕೆ ಮೋದಿ ಅವರು ಸರ್ಜಿಕಲ್ ಸ್ಟ್ರೈಕ್ ಮಾಡಿದರು ಇದು ತಪ್ಪಾ. ಮಾಗಡಿ ಶಾಸಕರ ಬಗ್ಗೆ ನಾನೇನು ಮಾತಾನಾಡುವುದಿಲ್ಲ ಎಂದರು.
ಬಿಜೆಪಿಯವರು ಬ್ರಿಟಿಷ್ ಇದ್ದ ಹಾಗೆ ಒಡೆದಾಳುವ ನೀತಿ ಅನುಸರಿಸುತ್ತಾರೆ ಎಂಬ ಶಾಸಕ ಬಾಲಕೃಷ್ಣ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿ, ಮಾಗಡಿ ಶಾಸಕನೇ ಬ್ರೀಟಿಷ ಇದ್ದಂಗೆ ಅದಾನ ಎಂದರು.
ಬಿಜೆಪಿ ಜೆಡಿಎಸ್ ಸಮಿಶ್ರ ಸರ್ಕರಾದಿಂದ ಉತ್ತರ ಪ್ರದೇಶದಲ್ಲಿ ಬಿಎಸ್ ಪಿ ಗೆ ಆದ ಜೆಡಿಎಸ್ ಗೆ ಆಗುತ್ತೆ ಎಂಬ ಶಾಸಕ ಬಾಲಕೃಷ್ಣ ಹೇಳಿಕೆ ವಿಚಾರ ಬಗ್ಗೆ ಪ್ರತಿಕ್ರಿಯಿಸಿ, ಆ ಶಾಸಕನ ಬಾಯಿ ಹಾಗೆ ಇದೆ ಹಾಗೆ ಹೇಳಿಕೊಂಡ ಹೋಗತಾರೆ. ನಮ್ಮ ನಾಯಕರು ಏನು ತೀರ್ಮಾನ ಮಾಡಿದ್ದಾರೆ ಅದಕ್ಕೆ ನಾವು ಬದ್ದರಾಗಿರುತ್ತೇವೆ ಎಂದರು.