ಹೊಸದಿಗಂತ ಡಿಜಿಟಲ್ ಡೆಸ್ಕ್:
ಅರಬ್ ಸಂಸ್ಥಾನ ಅಬುಧಾಬಿಯಲ್ಲಿ ಮೊದಲ ಹಿಂದು ದೇವಸ್ಥಾನವನ್ನು ಪ್ರಧಾನಿ ಮೋದಿ ಉದ್ಘಾಟಿಸಿದರು.
ಬೋಚಾಸನವಾಸಿ ಶ್ರೀ ಅಕ್ಷರ ಪುರುಷೋತ್ತಮ ಸ್ವಾಮಿನಾರಾಯಣ ಸಂಸ್ಥಾ ಮಂದಿರವನ್ನು ಪ್ರಧಾನಿ ಮೋದಿ ಉದ್ಘಾಟಿಸಿದ್ದಾರೆ. ವಿಶ್ವದ 3ನೇ ಅತೀ ದೊಡ್ಡ ಹಿಂದು ದೇಗುಲವನ್ನು ಬರೋಬ್ಬರಿ 700 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ.
ಬಾಪ್ಸ್ ಮಂದಿರದ ಒಳ ಪ್ರವೇಶಕ್ಕೂ ಮೊದಲು ಗಂಗಾ ಜಲವನ್ನು ಸಮರ್ಪಿಸಿದ ಪ್ರಧಾನಿ ಮೋದಿ ಬಳಿಕ ಪೂಜ್ಯ ಸಂತರ ಜೊತೆ ಮಂದಿ ಪ್ರವೇಶಿಸಿದರು. ಮಂದಿರ ಪ್ರವೇಶದ್ವಾರದಲ್ಲಿ ಮಹಾಂತ ಸ್ವಾಮಿ ಮಹರಾಜ್ ಗುರುಗಳಿಗೆ ವಂದಿಸಿ ಭವ್ಯ ಮಂದಿರ ಒಳ ಪ್ರವೇಶಿಸಿದರು. ಬಳಿಕ ಮಹಾಂತ ಸ್ವಾಮಿ ಮಹಾರಾಜ್ ಸಂತರ ಜೊತೆ ಮಂದಿರ ಉದ್ಘಾಟಿಸಿದರು.
ಸಂತರು, ಸ್ವಾಮೀಜಿಗಳ ಜೊತೆ ಕುಳಿತು ಮಂತ್ರ ಪಠಿಸಿದ ಪ್ರಧಾನಿ ಮೋದಿಗೆ ಸಂತ ಮಹಾರಾಜ ಸ್ವಾಮಿ ಕುಂಕುಮವಿಟ್ಟು, ಲೋಕಾರ್ಪಣೆ ಸಂಕಲ್ಪ ಕೈಗೊಂಡರು.
ಇಲ್ಲಿ ಕೃಷ್ಣ- ರಾಧೆ, ಶಿವ- ಪಾರ್ವತಿ ಮತ್ತು ಸೀತೆ, ರಾಮ, ಲಕ್ಷ್ಮಣ ಹಾಗೂ ಹನುಮಂತ ಸೇರಿ ಬಹುತೇಕ ಎಲ್ಲ ಹಿಂದು ದೇವರುಗಳನ್ನು ಪೂಜಿಸಲಾಗುತ್ತದೆ.
ಮಂದಿರವು 108 ಅಡಿ ಎತ್ತರ, 262 ಅಡಿ ಉದ್ದ ಮತ್ತು ಮತ್ತು 180 ಅಡಿ ಅಗಲವಿದೆ.ಒಟ್ಟು 27 ಏಕರೆ ಪ್ರದೇಶದಲ್ಲಿ ಈ ಮಂದಿರಕ್ಕಾಗಿ ಯಎಇ ಸರ್ಕಾರ ನೀಡಿದೆ. ಈ ಪೈಕಿ 17 ಏಕರೆ ಪ್ರದೇಶದಲ್ಲಿ ಭವ್ಯ ಮಂದಿರ ನಿರ್ಮಾಣಗೊಂಡಿದೆ. 20000 ಟನ್ ಕಲ್ಲಿನಿಂದ ಈ ಮಂದಿರ ನಿರ್ಮಾಣ ಮಾಡಲಾಗಿದೆ. ಆಯೋಧ್ಯೆ ರಾಮ ಮಂದಿರ ರೀತಿ, ಕಬ್ಬಿಣ ಸೇರಿದಂತೆ ಇತರ ಲೋಹಗಳನ್ನು ಬಳಸಿಲ್ಲ. ದೇಗುಲದ ನಿರ್ಮಾಣ ಕಾರ್ಯದಲ್ಲಿ 2,000 ಭಾರತೀಯ ಶಿಲ್ಪಿಗಳು ಕೆತ್ತನೆ ಕೆಲಸ ಮಾಡಿದ್ದರು.