Wednesday, November 26, 2025

ಛತ್ತೀಸ್‌ಗಢದ ನೂತನ ವಿಧಾನಸಭಾ ಕಟ್ಟಡ ಉದ್ಘಾಟಿಸಿದ ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್ ಡೆಸ್ಕ್:


ಛತ್ತೀಸ್‌ಗಢದ ನವ ರಾಯ್‌ಪುರ ಅಟಲ್ ನಗರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನೂತನ ವಿಧಾನಸಭಾ ಕಟ್ಟಡವನ್ನು ಉದ್ಘಾಟಿಸಿದರು.

ಮೊದಲು ವಿಧಾನಸಭಾ ಸಂಕೀರ್ಣದ ಆವರಣದಲ್ಲಿ ಹೊಸದಾಗಿ ನಿರ್ಮಿಸಲಾದ ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಪ್ರತಿಮೆಯನ್ನು ಪ್ರಧಾನಿ ಅನಾವರಣಗೊಳಿಸಿದರು.

ಈ ವೇಳೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಛತ್ತೀಸ್‌ಗಢ ವಿಧಾನಸಭಾ ಸ್ಪೀಕರ್ ರಮಣ್ ಸಿಂಗ್, ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ ಮತ್ತು ರಾಜ್ಯ ವಿಧಾನಸಭೆ ವಿರೋಧ ಪಕ್ಷದ ನಾಯಕ ಚರಣ್ ದಾಸ್ ಮಹಂತ್ ಅವರು ಇದ್ದರು.

2000 ದಲ್ಲಿ ಮಧ್ಯ ಪ್ರದೇಶ ಇಭ್ಭಾಗ ಮಾಡಿ ಛತ್ತೀಸ್‌ಗಢ ರಾಜ್ಯ ರಚನೆಯಾದ ನಂತರ ರಾಯ್‌ಪುರದ ಖಾಸಗಿ ಶಾಲೆಯನ್ನು ವಿಧಾನಸಭೆಯಾಗಿ ಮಾಡಿಕೊಳ್ಳಲಾಗಿತ್ತು. ಈಗ ತನ್ನದೇ ಆದ ಭವ್ಯ, ಆಧುನಿಕ ಮತ್ತು ಪರಿಸರ ಸ್ನೇಹಿ ನೂತನ ಕಟ್ಟಡಕ್ಕೆ ವಿಧಾನಸಭೆ ಸ್ಥಳಾಂತರಗೊಳ್ಳುತ್ತಿದೆ.

error: Content is protected !!