ಹೊಸದಿಗಂತ ಡಿಜಿಟಲ್ ಡೆಸ್ಕ್:
2013 ರಲ್ಲಿ ಜಾರಿಗೆ ತಂದ ವಕ್ಫ್ ಕಾಯ್ದೆಯನ್ನು ಉಲ್ಲೇಖಿಸಿ, ಕಾಂಗ್ರೆಸ್ ಪಕ್ಷವು ತುಷ್ಟೀಕರಣ ರಾಜಕೀಯದಲ್ಲಿ ತೊಡಗಿದೆ ಎಂದು ಹರಿಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಆರೋಪಿಸಿದ್ದಾರೆ.
“ಕಾಂಗ್ರೆಸ್ ತುಷ್ಟೀಕರಣ ರಾಜಕೀಯವನ್ನು ನಡೆಸಿ 2013 ರಲ್ಲಿ ವಕ್ಫ್ ಕಾಯ್ದೆಯನ್ನು ಪರಿಚಯಿಸಿತು. ಇದರಿಂದಾಗಿ ವಕ್ಫ್ ಮಂಡಳಿ, ಮುಸ್ಲಿಂ ಸಮುದಾಯ ಮತ್ತು ದೇಶವೂ ನಷ್ಟವನ್ನು ಅನುಭವಿಸಿತು. ಕಾಂಗ್ರೆಸ್ ಏನೇ ತಪ್ಪು ಮಾಡಿದರೂ, ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಅದನ್ನು ಸರಿಪಡಿಸುತ್ತಿದೆ” ಎಂದು ಹರಿಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಹೇಳಿದ್ದಾರೆ.
ಡಾ. ಬಿ.ಆರ್. ಅಂಬೇಡ್ಕರ್ ಜಯಂತಿಯಂದು ಏಪ್ರಿಲ್ 14 ರಂದು, ಪ್ರಧಾನಿ ಮೋದಿ ಹಿಸಾರ್ ವಿಮಾನ ನಿಲ್ದಾಣದಿಂದ ವಿವಿಧ ಅಭಿವೃದ್ಧಿ ಯೋಜನೆಗಳು ಮತ್ತು ವಿಮಾನ ಪ್ರಯಾಣ ಸೇವೆಗಳನ್ನು ಉದ್ಘಾಟಿಸಲು ಹರಿಯಾಣಕ್ಕೆ ಭೇಟಿ ನೀಡಲಿದ್ದಾರೆ. “ಪ್ರಧಾನಿ ಮೋದಿ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಹರಿಯಾಣ ತನ್ನ ಮೊದಲ ವಿಮಾನ ನಿಲ್ದಾಣವನ್ನು ಪಡೆಯಲಿದೆ ಎಂಬುದು ಹರಿಯಾಣಕ್ಕೆ, ವಿಶೇಷವಾಗಿ ಹಿಸಾರ್‌ಗೆ ಹೆಮ್ಮೆಯ ವಿಷಯ.” ಎಂದು ಹೇಳಿದರು.