ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದಲ್ಲಿ ಪ್ರಧಾನಿ ಮೋದಿ ಹಿಟ್ಲರ್ ರೀತಿ ಸರ್ವಾಧಿಕಾರ ನಡೆಸ್ತಿದ್ದಾರೆ, ನಮ್ಮ ಬ್ಯಾಂಕ್ ಖಾತೆಗಳಿಗೆ ಮುಟ್ಟುಗೋಲು ಹಾಕಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಸೋಲುವ ಭೀತಿಯೀಂದ ನರೇಂದ್ರ ಮೋದಿ ಸರ್ಕಾರ ಈ ರೀತಿ ಸಾಂವಿಧಾನಿಕ ಸಂಸ್ಥೆಗಳ ದುರುಪಯೋಗ ಮಾಡಿಕೊಂಡಿದೆ ಎಂದಿದ್ದಾರೆ.
ಡಿಕೆ ಶಿವಕುಮಾರ್ ಮಾತನಾಡಿ ನಾವು ಒಟ್ಟಾರೆ ರಾಜ್ಯದಲ್ಲಿ ೮೭ ಲಕ್ಷ ಪಕ್ಷದ ಸದಸ್ಯತ್ವ ನೀಡಿ ಎಲ್ಲರಿಂದ ಹತ್ತು ರೂಪಾಯಿ ಸಂಗ್ರಹಿಸಿದ್ದೆವು. ಇನ್ನು ರಾಜ್ಯದಲ್ಲಿ ಯುವ ಸದಸ್ಯತ್ವದಿಂದ ೯೦ ಕೋಟಿ ರೂಪಾಯಿ ಸಂಗ್ರಹ ಮಾಡಿದ್ದೇವೆ. ಇದನ್ನು ನಮಗೆ ನೀಡುತ್ತಿಲ್ಲ. ಮುಟ್ಟುಗೋಲು ಹಾಕಿಕೊಂಡು ಕೂತಿದೆ. ನ್ಯಾಯಾಲಯದಲ್ಲೂ ನಮಗೆ ಪರಿಹಾರ ಸಿಕ್ಕಿಲ್ಲ ಎಂದು ಹೇಳಿದ್ದಾರೆ.