ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಡಿಶಾದಲ್ಲಿ ಐಐಎಂ-ಸಂಬಲ್ಪುರದ ಹೊಸ ಕ್ಯಾಂಪಸ್ ಸೇರಿದಂತೆ 68,400 ಕೋಟಿ ರೂ.ಗಳ ಯೋಜನೆಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಮಧ್ಯಾಹ್ನ ಅನಾವರಣಗೊಳಿಸಿದ್ದಾರೆ.
ಮಧ್ಯಾಹ್ನ 1 ಗಂಟೆ ಸುಮಾರಿಗೆ ಜಾರ್ಸುಗುಡ ವಿಮಾನ ನಿಲ್ದಾಣಕ್ಕೆ ತಲುಪಿದ ಪ್ರಧಾನಿ ಮೋದಿ, ಐಐಎಂ-ಸಂಬಲ್ಪುರ ಕ್ಯಾಂಪಸ್ ಗೆ ತೆರಳಿದರು, ಅಲ್ಲಿ ಸಿಎಂ ನವೀನ್ ಪಟ್ನಾಯಕ್, ರಾಜ್ಯಪಾಲ ರಘುಬರ್ ದಾಸ್ ಮತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಜೊತೆ ಭಾಗಿಯಾದರು.
400 ಕೋಟಿ ರೂ.ಗಳ ಕ್ಯಾಂಪಸ್ ಜೊತೆಗೆ, 68,000 ಕೋಟಿ ರೂ.ಗಳ ಮೂಲಸೌಕರ್ಯ ಯೋಜನೆಗಳನ್ನು ಅನಾವರಣಗೊಳಿಸಿದರು.