ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಪದ್ಮವಿಭೂಷಣ ಪುರಸ್ಕೃತೆ ಹಾಗೂ ಖ್ಯಾತ ನಟಿ ವೈಜಯಂತಿ ಮಾಲಾ (Vyjayanthimala) ಅವರನ್ನು ಭೇಟಿಯಾಗಿದ್ದಾರೆ.
ತಮಿಳುನಾಡಿನ ಚೆನ್ನೈನಲ್ಲಿ ಭೇಟಿಯಾಗಿದ್ದು, ಮೋದಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಚೆನ್ನೈನಲ್ಲಿ ವೈಜಯಂತಿ ಮಾಲಾ (Vyjayanthimala) ಅವರನ್ನು ಭೇಟಿ ಮಾಡಿದ್ದು, ಖುಷಿ ನೀಡಿದೆ. ಅವರು ಪದ್ಮ ವಿಭೂಷಣ ಪ್ರಶಸ್ತಿ ಪಡೆದಿದ್ದಾರೆ ಮತ್ತು ಭಾರತೀಯ ಸಿನಿಮಾ ಜಗತ್ತಿಗೆ ನೀಡಿದ ಕೊಡುಗೆಗಾಗಿ ಭಾರತದಾದ್ಯಂತ ಮೆಚ್ಚುಗೆ ಪಡೆದಿದ್ದಾರೆ ಎಂದು ಮೋದಿ ಬರೆದಿದ್ದಾರೆ.
ವೈಜಯಂತಿ ಮಾಲಾ ಅವರು ಬಹುಭಾಷಾ ನಟಿಯಾಗಿ ಗುರುತಿಸಿಕೊಂಡವರು. 1949ರಲ್ಲಿ ವಾಳ್ಕೈ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು.