ಮೋದಿಯನ್ನು ಭೇಟಿಯಾದ ಮಹಿಳಾ ಯೋಗ ತರಬೇತುದಾರರು: ಭಾರತಕ್ಕೆ ಬರುವಂತೆ ಪ್ರಧಾನಿ ಆಹ್ವಾನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಈಜಿಪ್ಟ್ ಪ್ರವಾಸದಲ್ಲಿರುವ ಭಾರತದ ಪ್ರಧಾನಿ ನರೇಂದ್ರ ಮೋದಿಯನ್ನು ಭಾನುವಾರ ಪ್ರಮುಖ ಮಹಿಳಾ ಯೋಗ ತರಬೇತುದಾರರು ಭೇಟಿ ಮಾಡಿದರು. ಮೋದಿ ಅವರು ಈಜಿಪ್ಟ್‌ನ ಪ್ರಸಿದ್ಧ ಮಹಿಳಾ ಯೋಗ ತರಬೇತುದಾರರು ರೀಮ್ ಜಬಕ್ ಮತ್ತು ನಾಡಾ ಅಡೆಲ್ ಕುರಿತು  ಯೋಗದ ಬಗ್ಗೆ ಅವರ ಸಮರ್ಪಣೆಯನ್ನು ಶ್ಲಾಘಿಸಿದರು.

ಈಜಿಪ್ಟ್‌ನಲ್ಲಿ ಯೋಗದ ಉತ್ಸಾಹದ ಬಗ್ಗೆ ಇಬ್ಬರು ಬೋಧಕರು ಪ್ರಧಾನಿ ಮೋದಿ ಅವರಿಗೆ ಮಾಹಿತಿ ನೀಡಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದಾರೆ. ಯೋಗ ತರಬೇತುದಾರರಾದ ರೀಮ್ ಜಬಕ್ ಅವರು ಯೋಗದಲ್ಲಿ ತಮ್ಮ ಅನುಭವವನ್ನು ಪ್ರಧಾನಿ ಮೋದಿಯವರೊಂದಿಗೆ ಹಂಚಿಕೊಂಡರು. ಮೋದಿ ಅವರ ಬಿಡುವಿಲ್ಲದ ವೇಳಾಪಟ್ಟಿಯ ನಡುವೆಯೂ ಈಜಿಪ್ಟ್ ದೇಶದಲ್ಲಿ ಯೋಗದ ಪ್ರಾಮುಖ್ಯತೆಯನ್ನು ಪ್ರಸ್ತಾಪಿಸಲು ನಮಗೆ ಸಮಯ ನೀಡಿದರು ಎಂದು ರೀಮ್ ಜಬಕ್ ಹೇಳಿದರು.

ಈಜಿಪ್ಟ್‌ನಲ್ಲಿರುವ ಯೋಗ ಸಮುದಾಯದ ಬಗ್ಗೆ ತಿಳಿದುಕೊಳ್ಳಲು ಪ್ರಧಾನಿ ಮೋದಿ ತುಂಬಾ ಉತ್ಸುಕರಾಗಿದ್ದಾರೆ ಎಂದರು. ಪ್ರಪಂಚದ ಎಲ್ಲಾ ಧರ್ಮಗಳು ಶಾಂತಿಯಿಂದ ಬಂದಿವೆ ಎಂದು ಯೋಗ ಕಲಿಸಿದೆ ಎಂದು ಹೇಳಿದರು. ಈಜಿಪ್ಟ್‌ನ ಪ್ರಮುಖ ಯೋಗ ತರಬೇತುದಾರರನ್ನು ಭಾರತಕ್ಕೆ ಭೇಟಿ ನೀಡುವಂತೆ ಮೋದಿ ಆಹ್ವಾನಿಸಿದರು.

ಪ್ರಧಾನಿ ಮೋದಿ ಅವರು ಯೋಗದ ಬಗ್ಗೆ ಮತ್ತೆ ಮತ್ತೆ ತಮ್ಮ ಉತ್ಸಾಹವನ್ನು ತೋರಿಸಿದ್ದಾರೆ. ಇತ್ತೀಚೆಗೆ ಅವರು ವಿಶ್ವಸಂಸ್ಥೆಯ ಪ್ರಧಾನ ಕಛೇರಿಯಲ್ಲಿ ನಡೆದ 9ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದರು. ಪ್ರಧಾನಿ ಮೋದಿ ನೇತೃತ್ವದ ಕಾರ್ಯಕ್ರಮವು ವಿವಿಧ ದೇಶಗಳ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ಗೆ ಸೇರಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!