ಹಿರೋಷಿಮಾದಲ್ಲಿ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿಯನ್ನು ಭೇಟಿಯಾದ ಪ್ರಧಾನಿ ಮೋದಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜಪಾನ್‌ನ ಹಿರೋಷಿಮಾದಲ್ಲಿ (Hiroshima)ನಡೆಯುತ್ತಿರುವ ಜಿ7 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ (Volodymyr Zelensky) ಅವರನ್ನು ಭೇಟಿಯಾಗಿದ್ದಾರೆ .

2022ರಲ್ಲಿ ಉಕ್ರೇನ್‌ನಲ್ಲಿ ಸಂಘರ್ಷ ಆರಂಭವಾದ ನಂತರ ಉಭಯ ನಾಯಕರು ಭೇಟಿಯಾಗುತ್ತಿರುವುದು ಇದೇ ಮೊದಲು.

ಹಿರೋಷಿಮಾದಲ್ಲಿ ನಡೆದ ಜಿ-7 ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಅವರು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರೊಂದಿಗೆ ಮಾತುಕತೆ ನಡೆಸಿದರು ಎಂದು ಪ್ರಧಾನಿ ಕಚೇರಿ ಟ್ವೀಟ್ ಮಾಡಿದೆ.

ಜಿ7 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಜಪಾನ್‌ನ ಹಿರೋಷಿಮಾಗೆ ಆಗಮಿಸಿದರು. ಈ ವಾರ ಅವರು ಭಾಗವಹಿಸುತ್ತಿರುವ ಎರಡನೇ ಬಹುಪಕ್ಷೀಯ ಶೃಂಗಸಭೆ ಇದಾಗಿದೆ.

ಮೋದಿಯವರನ್ನು ಭೇಟಿಯಾದ ಝೆಲೆನ್ಸ್ಕಿ ತಮ್ಮ ಸಾಂಪ್ರದಾಯಿಕ ಆಲಿವ್ ಹಸಿರು ಬಣ್ಣದ ಉಡುಪು ಧರಿಸಿದ್ದರು.ಉನ್ನತ ಸ್ಥಾನದಲ್ಲಿರುವ ಅಧಿಕಾರಿಗಳ ಜೊತೆಯಲ್ಲಿ ಇಬ್ಬರೂ ನಾಯಕರು ಸಭೆಯಲ್ಲಿ ಭಾಗಿಯಾಗಿರುವ ಫೋಟೊವನ್ನು ಭಾರತದ ಪ್ರಧಾನಮಂತ್ರಿಯವರ ಕಚೇರಿ ಹಂಚಿಕೊಂಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!