ಪ್ರಧಾನಿ ಮೋದಿ ಭೇಟಿಯಾದ ಉತ್ತರಾಖಂಡ ಸಿಎಂ: ಶೀಘ್ರವೇ ಏಕರೂಪ ನಾಗರಿಕ ಸಂಹಿತೆ ಜಾರಿ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ ಕುರಿತು ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಪ್ರಧಾನಿ ಮೋದಿ ಅವರನ್ನು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಧಾಮಿ ಭೇಟಿ ಮಾಡಿದ್ದಾರೆ.

ಇತ್ತ ಮೋದಿ ಭೇಟಿ ವೇಳೆ ರಾಜ್ಯದ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಕರಡು ಕುರಿತು ಚರ್ಚಿಸಿದ್ದಾರೆ.

ಈ ವೇಳೆ ಸಿಎಂ ಜತೆಗೆ ಉತ್ತರಾಖಂಡ ಯುಸಿಸಿ ಕರಡು ರಚನೆ ಸಮಿತಿಯ ಅಧ್ಯಕ್ಷ ನ್ಯಾಯಮೂರ್ತಿ ರಂಜನಾ ಪ್ರಕಾಶ್ ದೇಸಾಯಿ ಕೂಡ ಜತೆಗಿದ್ದರು. ಬಳಿಕ ಈ ಕುರಿತು ಮಾತನಾಡಿದ ಧಾಮಿ, ಶೀಘ್ರದಲ್ಲೇ ಯುಸಿಸಿ ರಾಜ್ಯದಲ್ಲಿ ಜಾರಿಯಾಗಲಿದೆ ಎಂದು ಹೇಳಿದ್ದಾರೆ.

ಈ ಹಿಂದೆ ರಾಜ್ಯದ ಜನತೆಗೆ ನೀಡಿದ ಭರವಸೆಯಂತೆ ಜೂನ್ 30ರಂದು ಏಕರೂಪ ನಾಗರಿಕ ಸಂಹಿತೆಯ ಕರಡು ಸಿದ್ಧಪಡಿಸಲು ರಚಿಸಿದ್ದ ಸಮಿತಿ ತನ್ನ ಕಾರ್ಯವನ್ನು ಪೂರ್ಣಗೊಳಿಸಿದೆ. ದೇವಭೂಮಿ ಉತ್ತರಾಖಂಡದಲ್ಲಿ ಶೀಘ್ರವೇ ಏಕರೂಪ ನಾಗರಿಕ ಸಂಹಿತೆ ಜಾರಿಯಾಗಲಿದೆ ಎಂದು ಉತ್ತರಾಖಂಡ ಮುಖ್ಯಮಂತ್ರಿ ಟ್ವೀಟ್​ ಮಾಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!