ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಜ್ಮೀರ್ ಷರೀಫ್ ದರ್ಗಾಕ್ಕೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಗುರುವಾರ ‘ಚಾದರ್’ (chadar)ಅನ್ನು ಉಡುಗೊರೆಯಾಗಿ ನೀಡಿದರು.
ಗೌರವಾನ್ವಿತ ಸೂಫಿ ಸಂತ ಮೊಯಿನುದ್ದೀನ್ ಚಿಶ್ತಿ ಅವರ ಪುಣ್ಯಸ್ಮರಣೆಯ ಕಾರ್ಯಕ್ರಮಕ್ಕೆ ಭಾಗವಾಗಿ ಮುಸ್ಲಿಂ ಸಮುದಾಯದ ನಿಯೋಗವು ಮೋದಿ ಅವರನ್ನು ಭೇಟಿಯಾಗಿದ್ದರು.
ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಚಿತ್ರಗಳನ್ನು ಹಂಚಿಕೊಂಡ ಮೋದಿ, “ಮುಸ್ಲಿಂ ಸಮುದಾಯದ ನಿಯೋಗವನ್ನು ಭೇಟಿಯಾದೆ. ನಮ್ಮ ಸಂವಾದದ ಸಮಯದಲ್ಲಿ, ನಾನು ಪವಿತ್ರ ಚಾದರ್ ಅನ್ನು ನೀಡಿದ್ದು ಇದನ್ನು ಗೌರವಾನ್ವಿತ ಅಜ್ಮೀರ್ ಷರೀಫ್ ದರ್ಗಾದಲ್ಲಿ ಖ್ವಾಜಾ ಮೊಯಿನುದ್ದೀನ್ ಚಿಸ್ತಿಯ ಉರೂಸ್ ಸಮಯದಲ್ಲಿ ಇರಿಸಲಾಗುವುದು ಎಂದಿದ್ದಾರೆ.
ಸುಮಾರು 10 ಸದಸ್ಯರನ್ನೊಳಗೊಂಡ ನಿಯೋಗವು ಪ್ರಧಾನಮಂತ್ರಿ ಮತ್ತು ಚಾದರ್ ಜತೆ ಪೋಸ್ ನೀಡಿದೆ.
ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವೆ ಸ್ಮೃತಿ ಇರಾನಿ ಮತ್ತು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷ ಜಮಾಲ್ ಸಿದ್ದಿಕಿ ಕೂಡ ಸಭೆಯಲ್ಲಿ ಭಾಗವಹಿಸಿದ್ದರು.