Friday, August 29, 2025

ಡೊನಾಲ್ಡ್‌ ಟ್ರಂಪ್ ನಾಲ್ಕು ಬಾರಿ ಕಾಲ್‌ ಮಾಡಿದ್ರೂ ರಿಸೀವ್‌ ಮಾಡಿಲ್ವಾ ಪ್ರಧಾನಿ ಮೋದಿ??

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ 4 ಬಾರಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಮಾತನಾಡಲು ಪ್ರಯತ್ನಿಸಿದ್ದರು. ಆದರೆ ಮೋದಿ ಅವರು ಟ್ರಂಪ್‌ ಜೊತೆ ದೂರವಾಣಿಯಲ್ಲಿ ಮಾತನಾಡಲು ನಿರಾಕರಿಸಿದ್ದಾರೆ ಎಂದು ಜರ್ಮನಿಯ ಮಾಧ್ಯಮವೊಂದು ವರದಿ ಮಾಡಿದೆ.

ಭಾರತದ ಮೇಲೆ ಸುಂಕ ಸಮರ ಆರಂಭಿಸಿದ ಬಳಿಕ ಟ್ರಂಪ್‌ ಕರೆ ಮಾಡಿ ಮಾತನಾಡಲು ಮುಂದಾಗಿದ್ದರು ಎಂದು ಜರ್ಮನ್ ಪತ್ರಿಕೆ ಫ್ರಾಂಕ್‌ಫರ್ಟರ್ ಆಲ್ಗೆಮೈನ್ ವರದಿ ಮಾಡಿದೆ.

ಜುಲೈ 20 ರಂದು ಅಮೆರಿಕ ಭಾರತದಿಂದ ಆಮದಾಗುವ ವಸ್ತುಗಳ ಮೇಲೆ 25% ಸುಂಕವನ್ನು ವಿಧಿಸಿತ್ತು. ನಂತರ ರಷ್ಯಾದಿಂದ ಕಚ್ಚಾ ತೈಲವನ್ನು ಆಮದು ಮಾಡುತ್ತಿರುವುದಕ್ಕೆ ಭಾರತದಿಂದ ಆಮದಾಗುವ ವಸ್ತುಗಳ ಮೇಲೆ ಮತ್ತೆ 25% ಸುಂಕವನ್ನು ಡೊನಾಲ್ಡ್‌ ಟ್ರಂಪ್‌ ಹಾಕಿದ್ದಾರೆ. ಸದ್ಯ ಬ್ರೆಜಿಲ್ ಹೊರತುಪಡಿಸಿ ಅತಿ ಹೆಚ್ಚು ಸುಂಕ ಭಾರತದ ಮೇಲೆ ವಿಧಿಸಿದ್ದಾರೆ.

ಟ್ರಂಪ್‌ ನಿರ್ಧಾರದಿಂದ ಅಮೆರಿಕ ಭಾರತದ ನಡುವೆ ಬಿಕ್ಕಟ್ಟು ಆರಭವಾಗಿದೆ. ಬಿಕ್ಕಟ್ಟು ಪರಿಹಾರಕ್ಕೆ ಕರೆ ಮಾಡಿ ಮೋದಿಯನ್ನು ಮಣಿಯುವಂತೆ ಮಾಡಲು ಟ್ರಂಪ್‌ ನಾಲ್ಕೈದು ಬಾರಿ ಕರೆ ಮಾಡಿದ್ದಾರೆ. ಆದರೆ ಮೋದಿ ಟ್ರಂಪ್‌ ಕರೆಯನ್ನು ಸ್ವೀಕರಿಸಲಿಲ್ಲ ಎಂದು ಹೇಳಿದೆ.

ಇದನ್ನೂ ಓದಿ