ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿ ಹಿರಿಯ ನಾಯಕ ಮುರಳಿ ಮನೋಹರ್ ಜೋಶಿ ಅವರನ್ನು ಶನಿವಾರ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು,’ಗೌರವಾನ್ವಿತ ಮುರಳಿ ಮನೋಹರ್ ಜೋಶಿ ಅವರ ಮಾರ್ಗದರ್ಶನ ಮತ್ತು ಆಶೀರ್ವಾದವನ್ನು ಸ್ವೀಕರಿಸಿದ್ದೇನೆ. ಅವರನ್ನು ಭೇಟಿ ಮಾಡುವುದರಿಂದ ನನ್ನಂತ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತನಿಗೂ ಹೊಸ ಶಕ್ತಿಯನ್ನು ತುಂಬುತ್ತದೆ’ ಎಂದು ಮೋದಿ ಹೇಳಿದ್ದಾರೆ.
ಮಾಜಿ ಕೇಂದ್ರ ಸಚಿವರಾದ ಜೋಶಿ ಅವರು ಬಿಜೆಪಿಯನ್ನು ಬಲಪಡಿಸುವ ಕಾರ್ಯಚಟುವಟಿಕೆಗಳಲ್ಲಿ ಪ್ರಮುಖ ಪಾತ್ರವಹಿಸಿದ್ದರು.
आज आदरणीय मुरली मनोहर जोशी जी का मार्गदर्शन और आशीर्वाद मिला। उनसे मिलकर मेरे जैसे हर कार्यकर्ता को हमेशा एक नई ऊर्जा मिलती है। pic.twitter.com/jMxKCClkOP
— Narendra Modi (@narendramodi) July 29, 2023