October 10, 2026
Saturday, October 10, 2026
spot_img

ಸೌರಶಕ್ತಿ, ಪವನಶಕ್ತಿಯೇ ಭಾರತದ ಭವಿಷ್ಯದ ದಾರಿ: ‘ಮನ್ ಕಿ ಬಾತ್‌’ನಲ್ಲಿ ಪ್ರಧಾನಿ ಮೋದಿ ಸಂದೇಶ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶದ ಅಭಿವೃದ್ಧಿಗೆ ನವೀಕರಿಸಬಹುದಾದ ಇಂಧನ ಮೂಲಗಳ ಬಳಕೆ ಅತ್ಯಂತ ಮುಖ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ.

‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯುತ್ ಉಳಿತಾಯದ ಜೊತೆಗೆ ಸೌರಶಕ್ತಿ ಮತ್ತು ಪವನಶಕ್ತಿಯನ್ನು ಹೆಚ್ಚಾಗಿ ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದು ಕರೆ ನೀಡಿದರು. ಪರಿಸರ ಸ್ನೇಹಿ ಶಕ್ತಿಯ ಬಳಕೆ ಭಾರತವನ್ನು ಮತ್ತಷ್ಟು ಬಲಿಷ್ಠಗೊಳಿಸಲಿದೆ ಎಂದರು.

ಇದೇ ವೇಳೆ 2027ರ ಜನಗಣತಿಯನ್ನು ದೇಶದ ಅಭಿವೃದ್ಧಿಗೆ ಮಾರ್ಗದರ್ಶಕವಾಗುವ ಮಹತ್ವದ ಪ್ರಕ್ರಿಯೆ ಎಂದು ವಿವರಿಸಿದ ಪ್ರಧಾನಿ, ಇದು ಕೇವಲ ಸರ್ಕಾರದ ಜವಾಬ್ದಾರಿಯಲ್ಲ, ಪ್ರತಿಯೊಬ್ಬ ನಾಗರಿಕನ ಸಹಭಾಗಿತ್ವವೂ ಅಗತ್ಯ ಎಂದು ಹೇಳಿದರು. ಈ ಬಾರಿ ಮೊಬೈಲ್ ಆಪ್ ಮೂಲಕ ಸುಲಭವಾಗಿ ಮಾಹಿತಿ ದಾಖಲಿಸುವ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.

ಇದನ್ನೂ ಓದಿ:

ಜಾಗತಿಕ ಉದ್ವಿಗ್ನತೆಗಳ ನಡುವೆಯೂ ಶಾಂತಿ ಮತ್ತು ಅಹಿಂಸೆಯ ಮಾರ್ಗವೇ ವಿಶ್ವಕ್ಕೆ ಪರಿಹಾರ ನೀಡಬಲ್ಲದು ಎಂದು ಬುದ್ಧನ ಸಂದೇಶವನ್ನು ಪ್ರಧಾನಿ ನೆನಪಿಸಿದರು. ಜೊತೆಗೆ ಕಲ್ಪಾಕಂನ ಫಾಸ್ಟ್ ಬ್ರೀಡರ್ ರಿಯಾಕ್ಟರ್ ಸಾಧನೆಯನ್ನು ಶ್ಲಾಘಿಸಿ, ಭಾರತೀಯ ವಿಜ್ಞಾನಿಗಳ ಸಾಧನೆಗೆ ಅಭಿನಂದನೆ ಸಲ್ಲಿಸಿದರು. ಯುರೋಪಿಯನ್ ಬಾಲಕಿಯರ ಗಣಿತ ಒಲಿಂಪಿಯಾಡ್‌ನಲ್ಲಿ ಭಾರತದ ವಿದ್ಯಾರ್ಥಿನಿಯರು ವಿಶ್ವದ ಆರನೇ ಸ್ಥಾನ ಪಡೆದಿರುವುದು ದೇಶಕ್ಕೆ ಹೆಮ್ಮೆ ತಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

Must Read