September 15, 2026
Tuesday, September 15, 2026
spot_img

ಗಣೇಶನ ದರುಶನ ಪಡೆದ ಪ್ರಧಾನಿ ಮೋದಿ: ಪಿಯೂಷ್ ಗೋಯಲ್ ಮನೆಯಲ್ಲಿ ವಿಶೇಷ ಪೂಜೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶಾದ್ಯಂತ ಗಣೇಶ ಚತುರ್ಥಿಯ ಸಂಭ್ರಮ ಮನೆ ಮಾಡಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಸಚಿವ ಪಿಯೂಷ್ ಗೋಯಲ್ ಅವರ ದೆಹಲಿ ನಿವಾಸಕ್ಕೆ ಭೇಟಿ ಕೊಟ್ಟು ಅಲ್ಲಿ ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸಿ ದರುಶನ ಪಡೆದರು.

ಪೂಜೆಯ ಬಳಿಕ ಎಕ್ಸ್ ಖಾತೆಯಲ್ಲಿ ಈ ಫೋಟೋಗಳನ್ನು ಹಂಚಿಕೊಂಡಿದ್ದು, ದೇಶದ ಜನರ ಒಳಿತಿಗಾಗಿ ಪ್ರಾರ್ಥಿಸಿ ವಿಘ್ನ ನಿವಾರಕನ ಆಶೀರ್ವಾದ ಕೋರಿದರು ಎಂದು ಹೇಳಿದ್ದಾರೆ.

ಗೋಯಲ್ ನಿವಾಸಕ್ಕೆ ಉಪರಾಷ್ಟ್ರಪತಿ ಭೇಟಿ

ಪ್ರಧಾನಿ ಮೋದಿ ಅವರೊಂದಿಗೆ ಅದೇ ದಿನ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಕೂಡ ಪಿಯೂಷ್ ಗೋಯಲ್ ಅವರ ನಿವಾಸಕ್ಕೆ ತೆರಳಿ ಗಣೇಶನಿಗೆ ಪೂಜೆ ಸಲ್ಲಿಸಿದರು. ಇದಕ್ಕೂ ಮುನ್ನ ಅವರು ದೆಹಲಿಯ ಮಹಾರಾಷ್ಟ್ರ ಸದನದಲ್ಲಿ ಗಣೇಶನ ದರುಶನ ಪಡೆದಿದ್ದರು.

ಲಾಲ್ಬಾಗ್ಚಾ ರಾಜಾ ನ ದರುಶನ ಪಡೆದ ಅಮಿತ್ ಶಾ

ಮುಂಬೈನ ಪ್ರಸಿದ್ಧ ಲಾಲ್ಬಾಗ್ಚಾ ರಾಜಾ ಗಣಪತಿ ಪೆಂಡಾಲ್‌ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ನೀಡಿ ಪೂಜೆ ಸಲ್ಲಿಸಿದರು. ದೇಶದ ವಿವಿಧೆಡೆ ರಾಜಕೀಯ ನಾಯಕರು ಕೂಡ ಗಣೇಶೋತ್ಸವದಲ್ಲಿ ಪಾಲ್ಗೊಂಡು ಜನತೆಗೆ ಶುಭಾಶಯ ಕೋರಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !