ಹೊಸದಿಗಂತ ಡಿಜಿಟಲ್ ಡೆಸ್ಕ್:
ಪರಿಸರಕ್ಕೆ ಸಂಬಂಧಿಸಿದ ಚಿತ್ರ ಕಳಿಸಿಕೊಟ್ಟಿದ್ದ ಹೊನ್ನಾಳಿಯ ವಿದ್ಯಾರ್ಥಿಯೊಬ್ಬನಿಗೆ ಪ್ರಧಾನಿ ನರೇಂದ್ರ ಮೋದಿಯವರು ಪ್ರಶಂಸನಾ ಪತ್ರ ಕಳಿಸಿಕೊಟ್ಟಿದ್ದಾರೆ.
ವಿಧ್ಯಾರ್ಥಿ ಅಮೋಘ್ ಹೆಚ್.ಪಿ ಮೋದಿಯವರಿಗೆ ಇತ್ತೀಚೆಗೆ ಚಿತ್ರವನ್ನು ಕಳುಹಿಸಿಕೊಟ್ಟಿದ್ದ. ಬಾಲಕನ ಕಲಾ ಅಭಿರುಚಿಯನ್ನು ಗುರುತಿಸಿ, ಆತನ ವಿಳಾಸಕ್ಕೆ ಮೆಚ್ಚುಗೆಯ ಪತ್ರವನ್ನು ಪ್ರಧಾನಿ ಕಾರ್ಯಾಲಯ ಕಳುಹಿಸಿದೆ. ಮೋದಿ ಮೆಚ್ಚುಗೆಯಿಂದ ಬಾಲಕ ಹಾಗೂ ಆತನ ಪೋಷಕರು ಸಂತೋಷ ವ್ಯಕ್ತಪಡಿಸಿದ್ದಾರೆ.