ರಾಜ್ಯಕ್ಕೆ ಮೂರನೇ ‘ವಂದೇ ಭಾರತ್‌’ ರೈಲು: ಸೆ. 24ರಂದು ಪ್ರಧಾನಿ ಮೋದಿಯಿಂದ ಚಾಲನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ರಾಜ್ಯದಲ್ಲಿ ಮೂರನೇ ವಂದೇ ಭಾರತ್‌ ರೈಲು ಸಂಚಾರ ಆರಂಭವಾಗಲಿದ್ದು, ಸೆಪ್ಟಂಬರ್‌ 24ರಂದು ಪ್ರಧಾನಿ ನರೇಂದ್ರ ಮೋದಿಯವರಿಂದ ಚಾಲನೆ ಸಿಗಲಿದೆ.

ಕಾಚಿಗುಡ-ಯಶವಂತಪುರ ನಡುವೆ ಸಂಚರಿಸಲಿರುವ ಈ ರೈಲು ಆಂಧ್ರದ ಮೆಹಬೂಬ್‌ನಗರ, ಕರ್ನೂಲ್‌ ಸಿಟಿ, ಅನಂತಪುರ, ಧರ್ಮಾವರಂ ರೈಲು ನಿಲ್ದಾಣಗಳಲ್ಲಿ ಮಾತ್ರ ನಿಲುಗಡೆಯನ್ನು ಹೊಂದಿದೆ.
ರೈಲಿನ ಮೊದಲ ಪ್ರಾಯೋಗಿಕ ಸಂಚಾರ ಇಂದು ನಡೆಯಲಿದೆ.

ಕಾಚಿಗುಡ-ಯಶವಂತಪುರ ನಡುವೆ 610 ಕಿಲೋಮೀಟರ್‌ ಅಂತರ ಇದೆ. ಇದನ್ನು ಕ್ರಮಿಸಲು ಇತರ ರೈಲುಗಳು ಸುಮಾರು 12 ತಾಸು ತೆಗೆದುಕೊಂಡರೆ, ‘ವಂದೇ ಭಾರತ್‌’ ರೈಲು 8.30 ತಾಸುಗಳಲ್ಲಿ ಕ್ರಮಿಸಲಿದೆ.

ವೇಳಾಪಟ್ಟಿ ಹೀಗಿದೆ:

ಪ್ರತಿದಿನ ಬೆಳಿಗ್ಗೆ 5.30ಕ್ಕೆ ಕಾಚಿಗುಡದಿಂದ ಈ ರೈಲು ಹೊರಡಲಿದೆ. 6.59ಕ್ಕೆ ಮೆಹಬೂಬ್‌ನಗರ, 8.39ಕ್ಕೆ ಕರ್ನೂಲ್‌ ಸಿಟಿ, 10.54ಕ್ಕೆ ಅನಂತಪುರ, 11.25ಕ್ಕೆ ಧರ್ಮಾವರಂ ರೈಲು ನಿಲ್ದಾಣಗಳಿಗೆ ತಲುಪಿ ಮಧ್ಯಾಹ್ನ 2ಕ್ಕೆ ಯಶವಂತಪುರಕ್ಕೆ ತಲುಪಲಿದೆ.

ಯಶವಂತಪುರದಿಂದ ಮಧ್ಯಾಹ್ನ 2.45ಕ್ಕೆ ಹೊರಡಲಿದೆ. ಅನಂತಪುರಕ್ಕೆ ಸಂಜೆ 5.40ಕ್ಕೆ, ಕರ್ನೂಲ್‌ ಸಿಟಿಗೆ ರಾತ್ರಿ 7.50ಕ್ಕೆ, ಮೆಹಬೂಬ್‌ನಗರಕ್ಕೆ ರಾತ್ರಿ 9.39ಕ್ಕೆ ಬಂದು, ರಾತ್ರಿ 11.15ಕ್ಕೆ ಕಾಚಿಗುಡಕ್ಕೆ ತಲುಪಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!