ಸಂಸತ್ತಿನಲ್ಲಿ ಬಾಕ್ಸ್‌ ಆಫೀಸ್‌ ಹಿಟ್ `ಛಾವಾ’ ಸಿನಿಮಾ ವೀಕ್ಷಿಸಲಿದ್ದಾರೆ ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಇದೇ ಮಾ.27 ರಂದು ಸಂಸತ್ತಿನಲ್ಲಿ ಪ್ರಧಾನಿ ಮೋದಿ ಸೇರಿದಂತೆ ಕೇಂದ್ರ ಸಚಿವರು ವಿಕ್ಕಿ ಕೌಶಲ್ ನಟನೆಯ `ಛಾವಾ’ ಸಿನಿಮಾ ವೀಕ್ಷಿಸಲಿದ್ದಾರೆ.

ಈಗಾಗಲೇ ಬಾಕ್ಸ್‌ ಆಫೀಸ್‌ನಲ್ಲಿ ಹಿಟ್‌ ಆಗಿರುವ ಛಾವಾ ಜನರ ಮನಸ್ಸನ್ನು ಗೆದ್ದಿದೆ. ಇನ್ನೂ ಒಟಿಟಿಗೆ ಕೂಡ ಛಾವಾ ಆಗಮಿಸಿಲ್ಲ. ಸಿನಿಮಾ ರಿಲೀಸ್‌ ಆದಾಗಲೇ ಪ್ರಧಾನಿ ಮೋದಿ ಅದನ್ನು ಹೊಗಳಿ ಪೋಸ್ಟ್‌ ಒಂದನ್ನು ಮಾಡಿದ್ದರು.

ಮರಾಠಾ ದೊರೆ ಛತ್ರಪತಿ ಸಂಭಾಜಿ ಮಹಾರಾಜರ ಜೀವನಾಧಾರಿತ `ಛಾವಾ’ ಸಿನಿಮಾವನ್ನು ಸಂಸತ್ತಿನ ಗ್ರಂಥಾಲಯ ಕಟ್ಟಡದಲ್ಲಿರುವ ಬಾಲಯೋಗಿ ಸಭಾಂಗಣದಲ್ಲಿ ಪ್ರದರ್ಶಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಛಾವಾ ಸಿನಿಮಾದ ವಿಶೇಷ ಪ್ರದರ್ಶನದಲ್ಲಿ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಸೇರಿದಂತೆ ಎಲ್ಲಾ ಕೇಂದ್ರ ಸಚಿವರು ಭಾಗಿಯಾಗುವ ನಿರೀಕ್ಷೆಯಿದೆ. ಜೊತೆಗೆ ಛಾವಾ ಸಿನಿಮಾದಲ್ಲಿ ಸಂಭಾಜಿ ಮಹಾರಾಜರ ಪಾತ್ರದಲ್ಲಿ ಕಾಣಿಸಿಕೊಂಡಿರುವ ವಿಕ್ಕಿ ಕೌಶಲ್ ಹಾಗೂ ಇಡೀ ಸಿನಿಮಾ ತಂಡವು ಹಾಜರಾಗುವ ನಿರೀಕ್ಷೆಯಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!