ಹೊಸದಿಗಂತ ಡಿಜಿಟಲ್ ಡೆಸ್ಕ್
ಬ್ರಿಟನ್ ಪ್ರವಾಸದಲ್ಲಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ನಾರ್ಫೋಕ್‌ನ ಸ್ಯಾಂಡ್ರಿಂಗ್‌ಹ್ಯಾಮ್ ಎಸ್ಟೇಟ್‌ನಲ್ಲಿ ಬ್ರಿಟನ್‌ನ ರಾಜನಾದ ಕಿಂಗ್ ಚಾರ್ಲ್ಸ್ IIIರನ್ನು ಭೇಟಿಯಾದರು. ಈ ಸಂದರ್ಭದಲ್ಲಿ ಅವರು ಕಿಂಗ್ ಚಾರ್ಲ್ಸ್‌ಗೆ ಒಂದು ವಿಶಿಷ್ಟ ಗಿಡವನ್ನು ಉಡುಗೊರೆಯಾಗಿ ನೀಡಿದರು.
ಈ ಗಿಡವನ್ನೂ ಪ್ರಧಾನ ಮೋದಿ ಅವರ “ಏಕ್ ಪೇಡ್ ಮಾ ಕೆ ನಾಮ್” (ತಾಯಿಯ ಹೆಸರಿನಲ್ಲಿ ಒಂದು ಮರ) ಎಂಬ ಹಸಿರು ಅಭಿಯಾನದ ಅಂಗವಾಗಿ ನೀಡಿದ್ದಾರೆ. ಕಿಂಗ್ ಚಾರ್ಲ್ಸ್‌ಗೆ ನೀಡಿದ ಗಿಡವು ಡೇವಿಡಿಯಾ ಇನ್ವೊಲುಕ್ರಾಟಾ ‘ಸೋನೋಮಾ’ ಎಂಬ ಪ್ರಭೇದದ ಗಿಡವಾಗಿದೆ. ಈ ಸಸ್ಯವನ್ನು ಸಾಮಾನ್ಯವಾಗಿ ‘ಸೋನೋಮಾ ಡವ್ ಟ್ರೀ’ ಎಂದೂ ಕರೆಯಲಾಗುತ್ತದೆ. ಈ ಗಿಡವನ್ನು ಅಲಂಕಾರಿಕ ಸಸ್ಯವಾಗಿ ಬಳಸಲಾಗುತ್ತದೆ. ಕಡಿಮೆ ಸಮಯದಲ್ಲಿ ಹೂ ಬಿಡುವ ಈ ಗಿಡವು ಪೂರ್ತಿಯಾಗಿ ಹೆಮ್ಮರವಾಗಲು 10 ರಿಂದ 20 ವರ್ಷಗಳು ಬೇಕಾಗುತ್ತವೆ. ಎರಡು ಮೂರು ವರ್ಷಗಳಲ್ಲಿ ಇದರಲ್ಲಿ ಹೂವುಗಳು ಅರಳುತ್ತವೆ ಎಂಬುದೂ ವಿಶೇಷ.
ಈ ಭೇಟಿಯ ವಿವರವನ್ನು ಬ್ರಿಟನ್ ರಾಜಮನೆತನವು ತಮ್ಮ ಅಧಿಕೃತ ಎಕ್ಸ್ (ಹಳೆಯ ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡಿದೆ.
ಇದೇ ಸಂದರ್ಭದಲ್ಲಿ, ಭಾರತ ಮತ್ತು ಬ್ರಿಟನ್ ನಡುವೆ ಬಹು ನಿರೀಕ್ಷಿತ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಈ ಒಪ್ಪಂದವು ಪ್ರಧಾನಿ ಮೋದಿ ಮತ್ತು ಬ್ರಿಟನ್ ಪ್ರಧಾನಮಂತ್ರಿ ಕೀರ್ ಸ್ಟಾರ್ಮರ್ ಅವರ ಸಮ್ಮುಖದಲ್ಲಿ ನಡೆಯಿತು. ಭಾರತದಿಂದ ವಾಣಿಜ್ಯ ಮತ್ತು ಉದ್ಯಮ ಸಚಿವ ಪಿಯೂಷ್ ಗೋಯಲ್ ಹಾಗೂ ಬ್ರಿಟನ್‌ನಿಂದ ವ್ಯಾಪಾರ ಕಾರ್ಯದರ್ಶಿ ಜೋನಾಥನ್ ರೆನಾಲ್ಡ್ಸ್ ಈ ಮಹತ್ವದ ಒಪ್ಪಂದದ ಮೇಲೆ ಸಹಿ ಹಾಕಿದರು.
ಈ ಒಪ್ಪಂದದ ಪ್ರಕಾರ, ದ್ವಿಪಕ್ಷೀಯ ವ್ಯಾಪಾರವು ವರ್ಷಕ್ಕೆ ಸುಮಾರು 34 ಬಿಲಿಯನ್ ಡಾಲರ್‌ಗಳ ಮಟ್ಟಕ್ಕೆ ಹೆಚ್ಚಿಸುವ ಗುರಿಯನ್ನು ಹೊಂದಿದೆ. ಭಾರತ ಮತ್ತು ಬ್ರಿಟನ್ ನಡುವಿನ ವ್ಯವಹಾರ, ವಾಣಿಜ್ಯ ಹಾಗೂ ಸಾಂಸ್ಕೃತಿಕ ಸಂಬಂಧಗಳಲ್ಲಿ ಈ ಒಪ್ಪಂದ ಮಹತ್ವದ ಹೆಜ್ಜೆಯಾಗಿದೆ.
This afternoon, The King received the Prime Minister of the Republic of India, @NarendraModi, at Sandringham House. 🇮🇳
During their time together, His Majesty was given a tree to be planted this Autumn, inspired by the environmental initiative launched by the Prime Minister, “Ek… pic.twitter.com/9nhigoCgkw
— The Royal Family (@RoyalFamily) July 24, 2025