ಈಜಿಪ್ಟ್ ನ ಗೀಜಾ ಪಿರಮಿಡ್‌ಗೆ ಪ್ರಧಾನಿ ಮೋದಿ ಭೇಟಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಈಜಿಪ್ಟ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಈಜಿಪ್ಟ್ ರಾಜಧಾನಿ ಕೈರೋದ ಹೊರವಲಯದಲ್ಲಿರುವ ಗೀಜಾದ ಮಹಾ ಪಿರಮಿಡ್ ಗಳನ್ನು ಭಾನುವಾರ ವೀಕ್ಷಿಸಿದರು.

ವಿಶ್ವದ ಏಳು ಅದ್ಭುತಗಳಲ್ಲಿ ಒಂದಾದ ಈಜಿಪ್ಟ್ ನ ಪಿರಮಿಡ್ ಗಳನ್ನು ಪ್ರಧಾನಿ ಮೊಸ್ತಫಾ ಮಡ್ಬೌಲಿ ಅವರೊಂದಿಗೆ ತೆರಳಿ ನೋಡಿದರು.

ಉತ್ತರ ಈಜಿಪ್ಟ್ನ ಅಲ್-ಜಿಜಾ (ಗೀಜಾ) ಬಳಿ ನೈಲ್ ನದಿಯ ಪಶ್ಚಿಮ ದಂಡೆಯಲ್ಲಿ ಕಲ್ಲಿನ ಪ್ರಸ್ಥಭೂಮಿಯ ಮೇಲೆ ನಿರ್ಮಿಸಲಾದ 4 ನೇ ರಾಜವಂಶದ ಮೂರು ಪಿರಮಿಡ್ಗಳಿಗೆ ಕಣ್ತುಂಬಿಕೊಂಡರು.

ಪ್ರಾಚೀನ ಸಾಮ್ರಾಜ್ಯದ ನಾಲ್ಕನೇ ರಾಜವಂಶದ ಅಡಿಯಲ್ಲಿ ಆಳ್ವಿಕೆ ನಡೆಸಿದ ಫೇರೋ ಖುಫು ಅವರ ಸಮಾಧಿಯಾಗಿರುವ ಈಜಿಪ್ಟಿನ ಅತಿದೊಡ್ಡ ಪಿರಮಿಡ್ ಆಗಿರುವ ಗಿಜಾದ ಗ್ರೇಟ್ ಪಿರಮಿಡ್ ಬಗ್ಗೆ ಮಾಹಿತಿಗಳನ್ನು ಪ್ರಧಾನಿ ಮೋದಿ ಪಡೆದರು.

ಈ ಖುಷಿ ಹಂಚಿಕೊಂಡ ಪ್ರಧಾನಿ, ‘ಪಿರಮಿಡ್‌ ಗಳ ನೋಡಲು ನನ್ನ ಜೊತೆಗಿದ್ದಕ್ಕಾಗಿ ನಾನು ಪಿಎಂ ಮೊಸ್ತಫಾ ಮಡ್‌ಬೌಲಿ ಅವರಿಗೆ ಧನ್ಯವಾದ ಹೇಳುತ್ತೇನೆ. ನಮ್ಮ ರಾಷ್ಟ್ರಗಳ ಸಾಂಸ್ಕೃತಿಕ ಇತಿಹಾಸಗಳು ಮತ್ತು ಮುಂದಿನ ದಿನಗಳಲ್ಲಿ ಈ ಸಂಬಂಧಗಳನ್ನು ಹೇಗೆ ಆಳಗೊಳಿಸುವುದು ಎಂಬುದರ ಕುರಿತು ನಾವುಚರ್ಚೆಯನ್ನು ನಡೆಸಿದ್ದೇವೆ’ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!