ಪ್ರಧಾನಿ ಮೋದಿ ಲಕ್ಷ ರೂಪಾಯಿ ಸೂಟ್‌ ಧರಿಸುತ್ತಾರೆ, ನಾನು ಬಿಳಿ ಟೀ-ಶರ್ಟ್‌ ಮಾತ್ರ ಧರಿಸುತ್ತೇನೆ: ರಾಹುಲ್‌ ಗಾಂಧಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರಧಾನಿ ಮೋದಿ (Narendra Modi) ಅವರು ಲಕ್ಷ ರೂಪಾಯಿ ಸೂಟ್‌ಗಳನ್ನ ಧರಿಸುತ್ತಾರೆ. ಆದರೆ ನಾನು ಬಿಳಿ ಟೀ-ಶರ್ಟ್‌ ಮಾತ್ರ ಧರಿಸುತ್ತೇನೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ಹೇಳಿದ್ದಾರೆ.

ಮಧ್ಯಪ್ರದೇಶದಲ್ಲಿ (Madhya Pradesh) ಸತ್ನಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ನಾನು ಪ್ರಧಾನಿ ಮೋದಿಯವರ ಭಾಷಣ ಕೇಳಿದ್ದೇನೆ. ಅವರು ಪ್ರತಿ ಭಾಷಣದಲ್ಲಿ ನಾನು ಒಬಿಸಿ ಸಮುದಾಯದವನು ಎಂದು ಎಲ್ಲೆಡೆ ಹೇಳುತ್ತಿದ್ದಾರೆ. ಆದ್ರೆ ಅಂಥವರು ಲಕ್ಷ ರೂಪಾಯಿ ಬೆಲೆ ಬಾಳುವ ಸೂಟ್‌ ಧರಿಸುತ್ತಾರೆ. ಒಮ್ಮೆ ಬಳಸಿದ ಬಟ್ಟೆಯನ್ನು ಮತ್ತೊಮ್ಮೆ ಬಳಸಿದ್ದನ್ನು ನೀವು ಎಂದಾದರು ನೋಡಿದ್ದೀರಾ ಎಂದು ರಾಗಾ ಪ್ರಶ್ನಿಸಿದ್ದಾರೆ.

ನಾನು ಈ ಒಂದೇ ಒಂದು ಬಿಳಿ ಅಂಗಿಯನ್ನು ಧರಿಸುತ್ತೇನೆ. ನಾನು ಜಾತಿ ಆಧಾರಿತ ಜನಗಣತಿಯ ಬಗ್ಗೆ ಮಾತನಾಡಲು ಪ್ರಾರಂಭಿಸಿದಾಗ, ಮೋದಿ ಅವರ ಭಾಷಣದಿಂದ ಜಾತಿ ಕಣ್ಮರೆಯಾಯಿತು. ನಾನು ಅದರ ಬಗ್ಗೆ ಮಾತನಾಡಲು ಪ್ರಾರಂಭಿಸಿದಾಗಿನಿಂದ, ಭಾರತದಲ್ಲಿ ಜಾತಿ ಇಲ್ಲ ಎಂದು ಮೋದಿ ಹೇಳತೊಡಗಿದರು ಎಂದು ಟೀಕಾಪ್ರಹಾರ ನಡೆಸಿದ್ದಾರೆ.

ಒಂದು ವೇಳೆ ಕೇಂದ್ರದಲ್ಲಿ ಕಾಂಗ್ರೆಸ್‌ ಸರ್ಕಾರ ರಚನೆಯಾದರೆ ಎಲ್ಲಾ ರಾಜ್ಯಗಳಲ್ಲಿ ಜಾತಿವಾರು ಜನಗಣತಿ ನಡೆಸುವುದು ನಮ್ಮ ಮೊದಲ ಹೆಜ್ಜೆ. ನಮ್ಮ ಪಕ್ಷ ಅಧಿಕಾರಕ್ಕೆ ಬಂದ ತಕ್ಷಣ ರಾಷ್ಟ್ರವ್ಯಾಪಿ ಜಾತಿವಾರು ಗಣತಿ ಸಮೀಕ್ಷೆ ನಡೆಸುತ್ತೇವೆ ಎಂದು ರಾಹುಲ್‌ ಗಾಂಧಿ ಭರವಸೆ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!