ಪ್ರಧಾನಿ ಮೋದಿ, ಯೋಗಿ ನಮ್ಮ ಟಾರ್ಗೆಟ್: ಮುಂಬೈ ಪೊಲೀಸರಿಗೆ ಬಂತು ಮತ್ತೊಂದು ಬೆದರಿಕೆ ಕರೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೆಲ ದಿನಗಳ ಹಿಂದೆಯಷ್ಟೇ ಮುಂಬೈ ಪೊಲೀಸರಿಗೆ ಬೆದರಿಕೆ ಕರೆಯೊಂದು ಬಂದಿತ್ತು. ಇದೀಗ ಮತ್ತೆ ಅಂಥದ್ದೇ ಬೆದರಿಕೆ ಕರೆಯೊಂದು ಬಂದಿದ್ದು, ಈಗ

ಮುಂಬೈ ಪೊಲೀಸರಿಗೆ ಇಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹಾಗೂ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಅವರೇ ನಮ್ಮ ಟಾರ್ಗೆಟ್ ಎಂದು ಬೆದರಿಕೆ ಕರೆ ಬಂದಿದೆ.

ಕರೆಯಲ್ಲಿ ಇಬ್ಬರು ಮಹಾನ್ ನಾಯಕರೇ ನಮ್ಮ ಟಾರ್ಗೆಟ್ ಆಗಿದ್ದು, ಮುಂಬೈ ದಾಳಿಯಂತೆ ಮತ್ತೊಮ್ಮೆ ಅಟ್ಯಾಕ್ ಮಾಡಲಾಗುವುದು ಎಂದು ಬೆದರಿಸಿದ್ದಾನೆ. ಈ ಸಂಬಂಧ ಪೊಲೀಸರು ಅಪರಿಚಿತ ವ್ಯಕ್ತಿಯ ವಿರುದ್ಧ ಐಪಿಸಿ ಎಕ್ಷನ್ 509 (2)ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇತ್ತೀಚೆಗೆ ಸೀಮಾ ಹೈದರ್ (Seema Haider) ಎಂಬ ಪಾಕಿಸ್ತಾನದ (Pakistan) ಮಹಿಳೆ ಆನ್‍ಲೈ ನ್ ಗೇಮ್ ಮೂಲಕ ಪರಿಚಯವಾದ ತನ್ನ ಗೆಳೆಯನನ್ನು ಭೇಟಿ ಮಾಡಲು ಭಾರತಕ್ಕೆ ಬಂದಿದ್ದಾಳೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನದಿಂದ ಎಂದು ಹೇಳಲಾದ ಕರೆಯಲ್ಲಿ, ಸೀಮಾಳನ್ನು ಆಕೆಯ ತಾಯ್ನಾಡು ಪಾಕಿಸ್ತಾನಕ್ಕೆ ವಾಪಸ್ ಕಳುಹಿಸಿ ಕೊಡದಿದ್ದರೆ ಮುಂಬೈನಲ್ಲಾದ ದಾಳಿಯಂತೆ ಮತ್ತೊಂದು ಭಯೋತ್ಪಾದನಾ ದಾಳಿಯನ್ನು ಎದುರಿಸಲು ಸಜ್ಜಾಗಿ ಎಂದು ತಿಳಿಸಲಾಗಿತ್ತು. ಈ ಸಂಬಂಧ ತನಿಖೆ ನಡೆಸಿದ್ದ ಪೊಲೀಸರಿಗೆ ಇದೊಂದು ಹುಸಿ ಬಾಂಬ್ ಕರೆ ಎಂಬುದು ಬಯಲಾಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!