ಹೊಸದಿಗಂತ ಡಿಜಿಟಲ್ ಡೆಸ್ಕ್:
ರಕ್ಷಾಬಂಧನ ದಿನದಂದು ಪಾಕಿಸ್ತಾನದ ಖಮರ್ ಮೊಹ್ಸಿನ್ ಶೇಖ್, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಖಿ ಕಟ್ಟಲಿದ್ದಾರೆ. ಕಳೆದ 30 ವರ್ಷಗಳಿಂದ ಪ್ರಧಾನಿ ಮೋದಿಗೆ ರಾಖಿ ಕಟ್ಟುತ್ತಿರುವ ಖಮರ್ ಮೊಹಿಸಿನ್ ರಕ್ಷಾಬಂಧನದ ನಿಮಿತ್ತ ಇದೇ ತಿಂಗಳ 30ರಂದು ಪಾಕಿಸ್ತಾನದಿಂದ ದೆಹಲಿಗೆ ಬರಲಿದ್ದಾರೆ.
ʻನಾನು ಮೋದಿಯವರಿಗೆ ರಕ್ಷಾ ಬಂಧನದ ಶುಭಾಶಯಗಳನ್ನು ಕೋರುತ್ತೇನೆ. ಅವರ ಆರೋಗ್ಯ ಮತ್ತು ದೀರ್ಘಾಯುಷ್ಯಕ್ಕಾಗಿ ನಾನು ಪ್ರತಿದಿನ ದೇವರಲ್ಲಿ ಪ್ರಾರ್ಥಿಸುತ್ತೇನೆ. ನನ್ನ ಎಲ್ಲಾ ಕೋರಿಕೆಗಳು ಈಡೇರುತ್ತವೆ ಎಂದು ನಾನು ನಂಬುತ್ತೇನೆ. ಗುಜರಾತಿನ ಮುಖ್ಯಮಂತ್ರಿಯಾಗಲು ಮೋದಿಯವರು ಪ್ರಾರ್ಥಿಸಿದಾಗಲೂ ಅದು ಈಡೇರಿದೆ. ನಾನು ರಾಖಿ ಕಟ್ಟಿ ಅವರು ಪ್ರಧಾನಿಯಾಗಲಿ ಎಂದು ನನ್ನ ಆಸೆಯನ್ನು ವ್ಯಕ್ತಪಡಿಸಿದಾಗಲೆಲ್ಲಾ ದೇವರು ನನ್ನ ಎಲ್ಲಾ ಆಸೆಗಳನ್ನು ಪೂರೈಸಿದ್ದಾನೆ. ಮೋದಿ ದೇಶಕ್ಕಾಗಿ ಶ್ಲಾಘನೀಯ ಕೆಲಸ ಮಾಡುತ್ತಿದ್ದಾರೆʼ ಎಂದು ಕಮರ್ ಮೊಹಿಸಿನ್ ಹೇಳಿದರು.
ಪ್ರತಿ ವರ್ಷ ಖಮರ್ ಪ್ರಧಾನಿ ಮೋದಿಗೆ ಕೈಯಿಂದ ಮಾಡಿದ ರಾಖಿಗಳನ್ನು ಕಟ್ಟುತ್ತಾರೆ. ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗಲೂ ಕಮರ್ ಅಲ್ಲಿಗೆ ಹೋಗಿ ಕೈಗೆ ರಾಖಿ ಕಟ್ಟಿದ್ದರು. ಕೋವಿಡ್ -19 ಸಮಯದಲ್ಲಿ ಪ್ರಧಾನಿ ಮೋದಿಗೆ ರಾಖಿ ಕಟ್ಟಲು ಸಾಧ್ಯವಾಗಲಿಲ್ಲ, ಆದರೆ ಅದನ್ನು ಪೋಸ್ಟ್ ಮೂಲಕ ಕಳುಹಿಸಿರುವುದಾಗಿ ಕಮರ್ ತಿಳಿಸಿದ್ದಾರೆ. ಪಾಕಿಸ್ತಾನದ ಸಹೋದರಿ 31ನೇ ಬಾರಿಗೆ ರಾಖಿ ಕಟ್ಟಲು ಪಾಕಿಸ್ತಾನದಿಂದ ದೆಹಲಿಗೆ ಬರಲಿದ್ದಾರೆ.