ಹೊಸದಿಗಂತ ಡಿಜಿಟಲ್ ಡೆಸ್ಕ್ :
ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಗ್ರೀನ್ ಮೊಬಿಲಿಟಿ ರ್ಯಾಲಿಗೆ ಚಾಲನೆ ನೀಡಿದ್ದಾರೆ.
ಬೆಂಗಳೂರು ಉತ್ತರ ತಾಲೂಕಿನ ಮಾದಾವರ ಬಳಿ ಇರುವ ಬಿಐಇಸಿಯ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದ ಮೈದಾನದಲ್ಲಿ ಇಂಡಿಯಾ ಎನರ್ಜಿ ವೀಕ್ 2023 ಅನ್ನು ಉದ್ಘಾಟಿಸಿ ಇಂಡಿಯನ್ ಆಯಿಲ್ನ ವಿಶಿಷ್ಟ ಟ್ವಿನ್ ಕುಕ್ಟಾಪ್ ಸೋಲಾರ್ ಕುಕ್ಕರ್ ಒಂದನ್ನು ಅನಾವರಣಗೊಳಿಸಿದರು. ತದನಂತರ ಗ್ರೀನ್ ಮೊಬಿಲಿಟಿ ರ್ಯಾಲಿಗೆ ಚಾಲನೆ ನೀಡಿದ್ದಾರೆ.
ಏನಿದು ಗ್ರೀನ್ ಮೊಬಿಲಿಟಿ ರ್ಯಾಲಿ ?:
ಹಸಿರು ಇಂಧನ ಮೂಲಗಳನ್ನು ಬಳಸಿಕೊಂಡು ಚಲಿಸುವ ವಾಹನಗಳ ಭಾಗವಹಿಸುವಿಕೆಯನ್ನು ವೀಕ್ಷಿಸಲು ಏರ್ಪಡಿಸಲಾದ ರ್ಯಾಲಿ ಇದಾಗಿದೆ. ಇದು ಹಸಿರು ಇಂಧನಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಸಹಾಯ ಮಾಡುತ್ತದೆ.