ಸಮಾಜದಲ್ಲಿ ಒಗ್ಗಟ್ಟು, ಪರಸ್ಪರ ಸೌಹಾರ್ದತೆ ಹೆಚ್ಚಿಸಲು ನಾವೆಲ್ಲರೂ ಪ್ರತಿಜ್ಞೆ ಮಾಡೋಣ: ಬಕ್ರೀದ್‌ ಹಬ್ಬಕ್ಕೆ ಶುಭ ಕೋರಿದ ಪ್ರಧಾನಿ, ರಾಷ್ಟ್ರಪತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ದೇಶದೆಲ್ಲೆಡೆ ಬಕ್ರೀದ್‌ ಹಬ್ಬವನ್ನು ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತಿದೆ. ವಿವಿಧ ಮಸೀದಿಗಳಲ್ಲಿ ಮುಸ್ಲಿಂ ಸಮುದಾಯದವರು ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗಿಯಾಗಿ ಪರಸ್ಪರ ಶುಭಾಶಯ ಕೋರಿದ್ದಾರೆ. ಈ ಪವಿತ್ರ ಹಬ್ಬಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶುಭಾಶಯಗಳನ್ನು ತಿಳಿಸಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಪ್ರಧಾನಿ ಮೋದಿ,”ಈದ್-ಉಲ್-ಅಧಾ ದ ಶುಭಾಶಯಗಳು. ಈ ದಿನ ಎಲ್ಲರಿಗೂ ಸಂತೋಷ ಮತ್ತು ಸಮೃದ್ಧಿಯನ್ನು ತರಲಿ. ಇದು ನಮ್ಮ ಸಮಾಜದಲ್ಲಿ ಒಗ್ಗಟ್ಟು ಮತ್ತು ಸಾಮರಸ್ಯದ ಮನೋಭಾವವನ್ನು ಎತ್ತಿ ಹಿಡಿಯಲಿ, ಈದ್ ಮುಬಾರಕ್ ” ಎಂದು ಶುಭ ಕೋರಿದ್ದಾರೆ.

https://twitter.com/narendramodi/status/1674263363252256768?s=20

ಟ್ವೀಟ್‌ ಮೂಲಕ ಶುಭ ಕೋರಿರುವ ರಾಷ್ಟ್ರಪತಿ ಮುರ್ಮು, “ಪ್ರೀತಿ, ತ್ಯಾಗದ ಪವಿತ್ರ ಹಬ್ಬ ಬಕ್ರೀದ್. ಈ ಹಬ್ಬವು ಪರಿತ್ಯಾಗದ ಮಾರ್ಗವನ್ನು ಅನುಸರಿಸಲು ಮತ್ತು ಮಾನವೀಯತೆಯ ಸೇವೆಯನ್ನು ನಿಸ್ವಾರ್ಥವಾಗಿ ಮಾಡಲು ಪ್ರೇರೇಪಿಸುತ್ತದೆ. ಈ ಸಂದರ್ಭದಲ್ಲಿ ಸಮಾಜದಲ್ಲಿ ಪರಸ್ಪರ ಸೌಹಾರ್ದತೆಯನ್ನು ಹೆಚ್ಚಿಸಲು ನಾವೆಲ್ಲರೂ ಪ್ರತಿಜ್ಞೆ ಮಾಡೋಣ” ಎಂದಿದ್ದಾರೆ.

https://twitter.com/rashtrapatibhvn/status/1674232622896017410?s=20

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!