ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ಮೋದಿ ಇಂದು ಎರ್ನಾಕುಳಂ ಮರೀನ್ ಡ್ರೈವ್‌ನಲ್ಲಿ ನಡೆದ ಬಿಜೆಪಿ ಶಕ್ರಿಕೇಂದ್ರ ಇನ್ ಚಾರ್ಜ್ ಸಮ್ಮೇಳನದಲ್ಲಿ ಭಾಗಿಯಾಗಿದ್ದಾರೆ.
ಸದ್ಯ ಕೇರಳ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಬೆಳಗ್ಗೆ ಗುರುವಾಯೂರು ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ. ನಂತರ ಸುರೇಶ್ ಗೋಪಿ ಪುತ್ರಿ ವಿವಾಹಹದಲ್ಲಿ ಭಾಗಿಯಾಗಿದ್ದಾರೆ.
ಇದೇ ಮೊದಲ ಬಾರಿಗೆ ಶಕ್ತಿಕೇಂದ್ರ ಸಮಾವೇಶದಲ್ಲಿ ಪ್ರಧಾನಿ ಭಾಗಿಯಾಗಿದ್ದು, ಬಿಜೆಪಿ ವತಿಯಿಂದ ತೇಗದಿಂದ ಮಾಡಿದ ಬಿಲ್ಲು ಬಾಣದ ಮಾದರಿಯನ್ನು ಉಡುಗೊರೆಯಾಗಿ ನೀಡಲಾಗಿದೆ.
ದೇಶದ ಜನರ ಆದಾಯ ಹಾಗೂ ಉಳಿತಾಯವನ್ನು ಹೆಚ್ಚು ಮಾಡುವುದು ಬಿಜೆಪಿ ಕರ್ತವ್ಯವನ್ನಾಗಿ ಪರಿಗಣಿಸಿದೆ. ನಮ್ಮ ಸರ್ಕಾರ ಅವಕಾಶಕ್ಕಾಗಿ ಕಾಯದೇ ಜನರ ಸಹಾಯಕ್ಕಿಳಿದಿದೆ. ಸುಮಾರು ಒಂಬತ್ತು ವರ್ಷಗಳಿಂದ ೨೫ ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ ಎಂದು ಪ್ರಧಾನಿ ಹೇಳಿದ್ದಾರೆ.