January20, 2026
Tuesday, January 20, 2026
spot_img

RCB ವೇಗಿ ಯಶ್ ದಯಾಳ್ ವಿರುದ್ಧ ಪೋಕ್ಸೋ ಕೇಸ್​ ದಾಖಲು

ಹೊಸದಿಗಂತ ಡಿಜಿಟಲ್ ಡೆಸ್ಕ್:

RCB ವೇಗಿ ಯಶ್ ದಯಾಳ್ ವಿರುದ್ಧ ಮತ್ತೋರ್ವ ಹುಡುಗಿ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾಳೆ. ಗಾಜಿಯಾಬಾದ್ ನಂತರ ಜೈಪುರದಲ್ಲಿಯೂ ದಯಾಳ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ವೃತ್ತಿಜೀವನದ ಭರವಸೆ ನೀಡಿ ಕ್ರಿಕೆಟಿಗ ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಎಂದು ಸಂತ್ರಸ್ತೆ ಆರೋಪಿಸಿದ್ದಾಳೆ. ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಜೈಪುರದಲ್ಲಿ ದಯಾಳ್ ವಿರುದ್ಧ ಅತ್ಯಾಚಾರ ಮತ್ತು ಪೋಕ್ಸೋ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಲಾಗಿದೆ.

ಜೈಪುರದಲ್ಲಿ ಸಂತ್ರಸ್ತೆ ಕ್ರಿಕೆಟ್ ಆಡುವಾಗ, ದಯಾಳ್​​ಗೆ ಪರಿಚಯ ಆಗಿದ್ದಳು. ನಾನು ಕೂಡ ಕ್ರಿಕೆಟ್ ಆಡುತ್ತಿದ್ದೆ. ಆಗ ದಯಾಳ್ ಐಪಿಎಲ್ ಆಡಲು ಜೈಪುರಕ್ಕೆ ಬಂದಿದ್ದರು. ದಯಾಳ್​, ನನ್ನ ಕ್ರಿಕೆಟ್​ ಕರಿಯರ್​​ ಬಗ್ಗೆ ಸಲಹೆ ನೀಡುವ ನೆಪದಲ್ಲಿ ಹೋಟೆಲ್​​ಗೆ ಕರೆದುಕೊಂಡು ಹೋಗಿದ್ದರು. ಆಗ ನಾನು ಅಪ್ರಾಪ್ತ ವಯಸ್ಕಳಾಗಿದ್ದೆ ಎಂದು ಸಂತ್ರಸ್ತೆ ಹೇಳಿದ್ದಾಳೆ. ನಂತರ ನಾವಿಬ್ಬರು ಎರಡು ವರ್ಷಗಳ ಕಾಲ ಸಂಪರ್ಕದಲ್ಲಿದ್ದೇವು. ಅವರು ನನಗೆ ಬ್ಲ್ಯಾಕ್‌ಮೇಲ್ ಮಾಡಿ ನಿರಂತರ ಶೋಷಣೆ ಮಾಡುತ್ತಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

Must Read