ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರ ಜಿಲ್ಲೆಯಲ್ಲಿ ಔರಂಗಜೇಬನ ಸಮಾಧಿಯನ್ನು ನೆಲಸಮ ಮಾಡಬೇಕೆಂದು ಗುಂಪೊಂದು ಪ್ರತಿಭಟನೆ ನಡೆಸಿದ್ದು ಹಿಂಸಾಚಾರಕ್ಕೆ ಕಾರಣವಾಗಿದೆ.
ಹೌದು! ಪ್ರತಿಭಟನೆಯ ಸಮಯದಲ್ಲಿ ಮುಸ್ಲಿಂರ ಪವಿತ್ರ ಗ್ರಂಥವನ್ನು ಸುಟ್ಟುಹಾಕಲಾಗಿದೆ ಎಂಬ ವದಂತಿಯ ಹಿನ್ನಲೆಯಲ್ಲಿ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತು. ಆದರೆ ಹಿಂಸಾಚಾರವು ಸುಳ್ಳು ಸುದ್ದಿಯಿಂದ ಉಂಟಾಗಿದೆ. ಯಾವುದೇ ಗ್ರಂಥ ಸುಟ್ಟು ಹಾಕಿಲ್ಲ. ಪರಿಸ್ಥಿತಿ ಈಗ ನಿಯಂತ್ರಣದಲ್ಲಿದೆ. ಎಂದು ಪೊಲೀಸರು ಸ್ಫಷ್ಟಪಡಿಸಿದ್ದಾರೆ.
ಬಜರಂಗದಳ ಈ ಆರೋಪವನ್ನು ನಿರಾಕರಿಸಿದೆ ಹಾಗೂ ಪ್ರತಿಭಟನೆಯ ಭಾಗವಾಗಿ ಔರಂಗಜೇಬನ ಪ್ರತಿಕೃತಿಯನ್ನು ಮಾತ್ರ ಸುಟ್ಟುಹಾಕಿದ್ದೇವೆ ಎಂದಿದ್ದಾರೆ.
ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ, ಛತ್ರಪತಿ ಸಂಭಾಜಿನಗರ ಪೊಲೀಸರು ಔರಂಗಜೇಬನ ಸಮಾಧಿಯ ಸುತ್ತಲೂ ಭದ್ರತೆಯನ್ನು ಹೆಚ್ಚಿಸಿದ್ದಾರೆ. ಹೆಚ್ಚುವರಿ ಕ್ರಮಗಳಲ್ಲಿ ಕಡ್ಡಾಯ ಸಂದರ್ಶಕರ ನೋಂದಣಿ, ಪ್ರವಾಸಿಗರು ಸ್ಥಳಕ್ಕೆ ಪ್ರವೇಶಿಸುವ ಮೊದಲು ಗುರುತಿನ ದಾಖಲೆಗಳನ್ನು ಒದಗಿಸುವುದು ಮತ್ತು ಸಂದರ್ಶಕರ ನೋಂದಣಿಗೆ ಸಹಿ ಹಾಕುವುದು ಮೊದಲಾದ ಭದ್ರತಾ ಕಾರ್ಯಗಳನ್ನು ಮಾಡಲಾಗಿದೆ.