ಮೈದಾನಕ್ಕೆ ನುಗ್ಗಿ ಕೊಹ್ಲಿಯನ್ನು ಹಗ್ ಮಾಡುತ್ತೇನೆ ಎಂದು ಬಿಲ್ಡಪ್ ಕೊಟ್ಟವನನ್ನು ಠಾಣೆಯೇ ಕೂರಿಸಿದ ಪೊಲೀಸ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್: 

ಐಪಿಎಲ್ ಅಬ್ಬರ ಮತ್ತೆ ಶುರುವಾಗಿದ್ದು, ಚಿನ್ನಸ್ವಾಮಿ ಕ್ರೀಡಾಂಗಣ ಆರ್‌ಸಿಬಿ ಹಾಗೂ ಕೆಕೆಆರ್ ನಡುವಿನ ರೋಚಕ ಹೋರಾಟಕ್ಕೆ ರೆಡಿಯಾಗಿದೆ.

ಇತ್ತ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ ಬಳಿಕ ಕಾಣಿಸಿಕೊಳ್ಳುತ್ತಿರುವ ಮೊದಲ ಐಪಿಎಲ್ ಪಂದ್ಯ ಇದು. ಹೀಗಾಗಿ ಅಭಿಮಾನಿಗಳು ನಿರೀಕ್ಷೆ ಕೂಡ ಹೆಚ್ಚಿದೆ.

ಇದರ ನಡುವೆ ಅಭಿಮಾನಿಯೊಬ್ಬ ಪಂದ್ಯದ ನಡುವೆ ಭದ್ರತೆ ಉಲ್ಲಂಘಿಸಿ ಮೈದಾನಕ್ಕೆ ನುಗ್ಗುತ್ತೇನೆ. ಕೊಹ್ಲಿಯನ್ನು ಹಗ್ ಮಾಡುತ್ತೇನೆ ಎಂದು ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಮಾಡಿ ಹಾಕಿದ್ದ. ಇದೀಗಈ ರೀತಿ ಬಿಲ್ಡಪ್ ಪಡೆದುಕೊಂಡಿದ್ದ ಈ ಅಭಿಮಾನಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲೇ ಇರಬೇಕಾದ ಪರಿಸ್ಥಿತಿ ಎದುರಾಗಿದೆ.

ಆರ್‌ಸಿಬಿ -ಕೆಕೆಆರ್ ನಡುವಿನ ಪಂದ್ಯದಲ್ಲಿ ವೀಕ್ಷಕರ ಗ್ಯಾಲರಿಯಿಂದ ಹೇಗಾದರೂ ಮಾಡಿ ಮೈದಾನಕ್ಕೆ ನುಗ್ಗುತ್ತೇನೆ. ಬಳಿಕ ಕೊಹ್ಲಿಯನ್ನು ಅಪ್ಪಿಕೊಳ್ಳುತ್ತೇನೆ ಎಂದು ಶರಣ್ ವಿಡಿಯೋ ಮಾಡಿ ಪೋಸ್ಟ್ ಮಾಡಿದ್ದಾನೆ. ಸೋಶಿಯಲ್ ಮೀಡಿಯಾದಲ್ಲಿ ಹದ್ದಿನ ಕಣ್ಣಿಟ್ಟಿದ್ದ ಪೊಲೀಸರಿಗೆ ಈ ವಿಡಿಯೋ ಕಣ್ಣಿಗೆ ಬಿದ್ದಿದೆ. ವಿಡಿಯೋ, ಸೋಶಿಯಲ್ ಮೀಡಿಯಾ ಖಾತೆ ಪರಿಶೀಲಿಸಿದ ಪೊಲೀಸರು ನೇರವಾಗಿ ಯುವಕನ ಸಂಪರ್ಕಿಸಿದ್ದಾರೆ.

ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಇತ್ತ ಪೊಲೀಸರು ಯುವಕ ಶರಣ್‌ನನ್ನು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಕರೆಯಿಸಿದ್ದಾರೆ. ಪೊಲೀಸರ ಸೂಚನೆಯಂತೆ ವಿಡಿಯೋವನ್ನು ಅಭಿಮಾನಿ ಶರಣ್ ಡಿಲೀಟ್ ಮಾಡಿದ್ದಾನೆ.

ಕಬ್ಬನ್ ಪಾರ್ಕ್ ಪೊಲೀಸರು ಮುನ್ನಚ್ಚೆರಿಕಾ ಕ್ರಮವಾಗಿ ಅಭಿಮಾನಿ ಶರಣ್‌ನನ್ನು ವಶಕ್ಕೆ ಪಡೆದಿದ್ದಾರೆ. ಆರ್‌ಸಿಬಿ ಕೆಕೆಆರ್ ಪಂದ್ಯ ಮುಗಿಯು ವರೆಗೂ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲೇ ಇರಬೇಕಾಗಿದೆ. ಪಂದ್ಯ ನೋಡಲು ಅವಕಾಶವಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!