ದಿಗಂತ ವರದಿ ವಿಜಯಪುರ:
ಭೀಮಾತೀರದ ಹಂತಕ ಬಾಗಪ್ಪ ಹರಿಜನ ಶಿಷ್ಯ ಸುಶೀಲ ಕಾಳೆ ಈತನನ್ನು ಸೋಮವಾರ ಬರ್ಬರ ಹತ್ಯೆ ಮಾಡಿದ ಆರೋಪಿಗಳಿಬ್ಬರ ಕಾಲಿಗೆ ಗುಂಡು ಹಾರಿಸಿ ಪೊಲೀಸರು ಬಂಧಿಸಿದ ಘಟನೆ ನಗರ ಹೊರ ಭಾಗದಲ್ಲಿ ನಡೆದಿದೆ.
ಆರೋಪಿಗಳಾದ ಆಕಾಶ ಕಲ್ಲವ್ವಗೋಳ, ಸುಭಾಷ ಬಗಲಿ ಕಾಲಿಗೆ ಗುಂಡು ಬಿದಿದ್ದು, ಅವರನ್ನು ವಶಕ್ಕೆ ಪಡೆದು, ಆಸ್ಪತ್ರೆಗೆ ದಾಖಲಿಸಲಾಗಿದೆ
ಸುಶೀಲ ಕಾಳೆ ಹತ್ಯೆ ಪ್ರಕರಣದ ಆರೋಪಿಗಳು ವಿಜಯಪುರ ಹೊರ ಭಾಗದ ಇಟ್ಟಂಗಿಹಾಳ ಗ್ರಾಮದಲ್ಲಿರುವ ಮಾಹಿತಿ ಆಧರಿಸಿ ಪೊಲೀಸರು ಬಂಧಿಸಲು ಹೋಗಿದ್ದರು. ಈ ವೇಳೆ ನಾಲ್ಕೈದು ಜನರಿದ್ದ ಆರೋಪಿಗಳ ತಂಡ, ಪೊಲೀಸರ ಮೇಲೆ ಕಂಟ್ರಿ ಪಿಸ್ತೂಲಿನಿಂದ ದಾಳಿ ಮಾಡಿ, ಪರಾರಿ ಆಗಲು ಯತ್ನಿಸುತ್ತಿದ್ದಾಗ, ಆತ್ಮರಕ್ಷಣೆಗಾಗಿ ಗಾಂಧಿಚೌಕ್ ಸಿಪಿಐ ಪ್ರದೀಪ ತಳಕೇರಿ ಆರೋಪಿಗಳ ಕಾಲಿಗೆ ಗುಂಡು ಹಾರಿಸಿದ್ದು, ಇಬ್ಬರನ್ನು ವಶಕ್ಕೆ ಪಡೆಯಲಾಗಿದ್ದು, ಇನ್ನು ಉಳಿದ ಆರೋಪಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.