ಜನಸೇನಾ ನಾಯಕ ಪವನ್‌ ಕಲ್ಯಾಣ್‌ ಪೊಲೀಸರ ವಶಕ್ಕೆ:‌ ತಡರಾತ್ರಿ ಹೈಡ್ರಾಮಾ

ಹೊಸದಿಗಂತ ಡಿಜಿಟಲ್ ಡೆಸ್ಕ್:‌ 

ಮಂಗಳಗಿರಿಯಲ್ಲಿರುವ ಪಕ್ಷದ ಕೇಂದ್ರ ಕಚೇರಿಯಲ್ಲಿ ಇಂದು ಪಿಎಸಿ ಸಭೆಯಲ್ಲಿ ಭಾಗವಹಿಸಲು ಬರುತ್ತಿದ್ದ ಜನಸೇನಾ ನಾಯಕ ಪವನ್ ಕಲ್ಯಾಣ್ ಅವರನ್ನು ಪೊಲೀಸರು ತಡರಾತ್ರಿ ವಶಕ್ಕೆ ಪಡೆದರು. ಚಂದ್ರಬಾಬು ಬಂಧನದ ಹಿನ್ನೆಲೆಯಲ್ಲಿ ಶಾಂತಿ ಸುವ್ಯವಸ್ಥೆ ಸಮಸ್ಯೆ ಉಂಟಾಗಲಿದೆ ಎಂದು ಮನವಿ ಮಾಡಿದರೂ ಕೇಳದ ಹಿನ್ನೆಲೆಯಲ್ಲಿ ಸಭೆ ಏರ್ಪಡಿಸಿದ್ದಕ್ಕೆ ಜಗ್ಗಯ್ಯಪೇಟೆ ಪೊಲೀಸರು ಪವನ್‌ ಕಲ್ಯಾಣ್‌ರನ್ನು ವಶಕ್ಕೆ ಪಡೆದಿದ್ದಾರೆ. ಪವನ್ ಕಲ್ಯಾಣ್ ಜೊತೆಗೆ ಪಕ್ಷದ ರಾಜಕೀಯ ವ್ಯವಹಾರಗಳ ಸಮಿತಿಯ ಅಧ್ಯಕ್ಷ ನಾದೆಂದ್ಲ ಮನೋಹರ್ ಅವರನ್ನೂ ಆಂಧ್ರಪ್ರದೇಶ ಪೊಲೀಸರು ಅನುಮಂಚಿಪಲ್ಲಿಯಲ್ಲಿ ಬಂಧಿಸಿದ್ದಾರೆ.

ಬಂಧನದ ಬಳಿಕ ತಡರಾತ್ರಿ ಹೈಡ್ರಾಮಾ ಶುರುವಾಗಿದ್ದು, ಆ ನಂತರ ಅವರನ್ನು ಬಿಡುಗಡೆ ಮಾಡಿ ಪವನ್ ಕಲ್ಯಾಣ್ ಗೆ ವಿಜಯವಾಡಕ್ಕೆ ಹೋಗಲು ಪೊಲೀಸರು ಅನುಮತಿ ನೀಡಿದರು. ವಿಜಯವಾಡ-ಹೈದರಾಬಾದ್ ಹೆದ್ದಾರಿಯಲ್ಲಿ ಪ್ರತಿ ಚೆಕ್‌ಪೋಸ್ಟ್‌ನಲ್ಲೂ ಪವನ್‌ರನ್ನು ತಡೆದಿದ್ದರಿಂದ ತೀವ್ರ ಉದ್ವಿಗ್ನತೆ ಉಂಟಾಯಿತು. ಪವನ್ ಕಲ್ಯಾಣ್ ಅವರ ಬೆಂಗಾವಲು ವಾಹನವನ್ನು ತಡೆಯಲು ಜಗ್ಗಯ್ಯಪೇಟೆ ಬಳಿಯ ಗರಿಕಪಾಡು ಚೆಕ್‌ಪೋಸ್ಟ್‌ನಲ್ಲಿ ಪೊಲೀಸರು ಬ್ಯಾರಿಕೇಡ್‌ಗಳನ್ನು ಹಾಕಿದರು. ಗಲಾಟೆ ಮಾಡಿದ ಜನಸೇನಾ ಕಾರ್ಯಕರ್ತರ ಮೇಲೆ ಲಾಠಿಪ್ರಹಾರವೂ ನಡೆಯಿತು.

ಈ ಘಟನೆಯಿಂದಾಗಿ ವಿಜಯವಾಡ-ಹೈದರಾಬಾದ್ ಹೆದ್ದಾರಿ ಟ್ರಾಫಿಕ್‌ ಕಿಕ್ಕಿರಿದು ತುಂಬಿತ್ತು. ಪವನ್‌ ಕಲ್ಯಾಣ್‌ ಅವರನ್ನು ವಶಕ್ಕೆ ಪಡೆದ ಪೊಲೀಸರ ವಿರುದ್ಧ ಜನಸೇನಾ ಕಾರ್ಯಕರ್ತರು ರಸ್ತೆಯಲ್ಲೇ ಮಲಗಿ ಪ್ರತಿಭಟನೆ ನಡೆಸಿದರು. ಹೈದರಾಬಾದ್-ವಿಜಯವಾಡ ರಸ್ತೆಯಲ್ಲಿ ಭಾರಿ ಸಂಖ್ಯೆಯಲ್ಲಿ ವಾಹನಗಳು ಸಿಲುಕಿಕೊಂಡಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!