ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿಕ್ಕಮಗಳೂರಿನಲ್ಲಿ ವಕೀಲರು ಹೆಲ್ಮೆಟ್ ಧರಿಸಿಲ್ಲ ಎನ್ನೋ ಕಾರಣಕ್ಕೆ ಪೊಲೀಸ್ ಸಿಬ್ಬಂದಿ ಹಲ್ಲೆ ನಡೆಸಿದ್ದ ಘಟನೆ ಸಂಬಂಧ ಹೈಕೋರ್ಟ್ ಕಲಾಪ ಬಹಿಷ್ಕಾರಕ್ಕೆ ಮುಂದಾಗಿದ್ದ ವಕೀಲರನ್ನು ಸಮಾಧಾನಿಸಿದ ನ್ಯಾಯಪೀಠವು, ಸ್ವಯಂ ಪ್ರೇರಿತವಾಗಿ ಮೊಕದ್ದಮೆ ದಾಖಲಿಸಲು ಸೂಚಿಸಿದೆ.
ಚಿಕ್ಕಮಗಳೂರಿನ ವಕೀಲ ಪ್ರೀತಂ ಎಂಬುವರ ಹೆಲ್ಮೆಟ್ ಧರಿಸದೇ ಬೈಕ್ ಚಲಾಯಿಸಿಕೊಂಡು ತೆರಳುತ್ತಿದ್ದರು. ಈ ವೇಳೆ ಹೆಲ್ಮೆಟ್ ಹಾಕಿರದ ಕಾರಣ ಪೊಲೀಸರು ಅವರನ್ನ ತಡೆದಿದ್ದರು. ಮಾತಿಗೆ ಮಾತು ಬೆಳೆದಾಗ ವಕೀಲ ಪ್ರೀತಂ ಮೇಲೆ ಪೊಲೀಸ್ ಸಿಬ್ಬಂದಿ ಹಲ್ಲೆ ಕೂಡ ನಡೆಸಿದ್ದರು.
ಈ ಘಟನೆಯ ನಂತ್ರ, ನಗರದಲ್ಲಿ ಪೊಲೀಸರ ನಡೆಯನ್ನು ಖಂಡಿಸಿ ವಕೀಲರು ಪ್ರತಿಭಟನೆ ನಡೆಸಿದ್ದರು. ಅದರ ಪ್ರತಿಧ್ವನಿ ಹೈಕೋರ್ಟ್ ನಲ್ಲಿ ಆಗಿತ್ತು. ಕಲಾಪ ಬಹಿಷ್ಕರಿಸೋದಕ್ಕೆ ವಕೀಲರು ಮುಂದಾಗಿದ್ದರು.
ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ಪ್ರಸನ್ನ ಬಿ ವರಾಳೆ, ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರ ನ್ಯಾಯಪೀಠವು ಕಲಾಪ ಬಹಿಷ್ಕರಣೆ ಸರಿಯಲ್ಲ ಎಂಬುದಾಗಿ ತಿಳಿಸಿತು.
ಅಲ್ಲದೇ ಪೊಲೀಸರ ಹಲ್ಲೆಯ ಬಗ್ಗೆ ಅಸಮಾಧಾನವನ್ನು ಹೊರ ಹಾಕಿದರು.ಇದೊಂದು ನಾಗರೀಕ ಸಮಾಜವೇ ತಲೆ ತಗ್ಗಿಸೋ ಘಟನೆಯಾಗಿದೆ. ವಕೀಲರ ಮೇಲೆ ಹೀಗೆ ಆದ್ರೇ ಜನಸಾಮಾನ್ಯರ ಕತೆ ಏನು ಎಂದು ಹೇಳಿ, ಸ್ವಯಂ ಪ್ರೇರಿತವಾಗಿ ಪ್ರಕರಣ ಸಂಬಂಧ ದೂರು ದಾಖಲಿಸೋದಕ್ಕೆ ಸೂಚಿಸಿದೆ.