ಹೊಸದಿಗಂತ ವರದಿ ಶಿವಮೊಗ್ಗ:
ಬಂಧಿಸಲು ಹೋದ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲೆತ್ನಿಸಿದ ಕೊಲೆ ಆರೋಪಿ ಮಂಜುನಾಥ ಯಾನೆ ಚಳಿ ಮಂಜ ಎಂಬಾತನ ಕಾಲಿಗೆ ಗುಂಡು ಹೊಡೆದು ಇಂದು ಬಂಧಿಸಲಾಗಿದೆ.
ಭದ್ರಾವತಿ ತಾಲ್ಲೂಕು ಹೊಳೆಹೊನ್ನೂರಿನಲ್ಲಿ ವಾಕಿಂಗ್ ಗೆ ತೆರಳಿದ್ದ ಹೇಮಣ್ಣ ಎಂಬುವರನ್ನು ಮೇ 9 ರಂದು ಕೊಲೆ ಮಾಡಲಾಗಿತ್ತು. ಈ ಸಂಬಂಧ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿತ್ತು.
ತಂಜೀಮ್ ಯಾನೆ ತನು, ಮಂಜುನಾಥ್ ಯಾನೆ ಚಳಿ ಮಂಜ ಕೊಲೆ ಆರೋಪಿಗಳೆಂದು ಪತ್ತೆ ಹಚ್ಚಿದ ಪೊಲೀಸರು, ಹೊಳಲೂರು ಗುಡ್ಡದ ಬಳಿ ಮಂಜನ ಇರುವಿಕೆಯನ್ನು ಗುರುತಿಸಿ ಪಿಐ ಲಕ್ಷ್ಮೀಪತಿ ನೇತೃತ್ವದ ತಂಡ ಬಂಧಿಸಲು ಹೋಗಿದ್ದಾಗ ಆರೋಪಿ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ.
ಈ ಘಟನೆಯಲ್ಲಿ ಹೊಳೆಹೊನ್ನೂರು ಪಿಸಿ ಪ್ರಕಾಶ್ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.